ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.)ಮಂಜೇಶ್ವರ. ತೂಮಿನಾಡು 18 ನೇ ಕುಲಾಲ ಆಸರೆ ತುರ್ತು ಸಹಾಯ ಹಸ್ತ ಯೋಜನೆ ಯನ್ನು ಕುಲಾಲ ಸಂಘ ಕುಂಬಳೆ ಶಾಖೆಗೋಳಪಟ್ಟ ಕಿದೂರು ಪಾoಬಾಡಿಯ ಉದಯ ಕುಮಾರ್ ರವರ ಕಿವಿಗೆ ಸಂಬಂಧ ಪಟ್ಟ ನರದ ಚಿಕಿತ್ಸೆಗಾಗಿ ರೂ. 15,000/- ಮೊತ್ತದ ಚೆಕ್ ನ್ನು ಇಂದು (ತಾರೀಕು 10/10/2026)ಹಸ್ತಾoತರಿಸಲಾಯಿತು .
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕಬ್ಬಿನ ಹಿತ್ಲು, ಕುಂಬಳೆ ಶಾಖೆಯ ಕಾರ್ಯದರ್ಶಿ ಸತೀಶ್ ಶ್ರಾವಣಕೆರೆ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧೀರ್ ರಂಜನ್ ಕೆ ದೈಗೋಳಿ, ಸುಧೀರ್ ಕೊಡಂಗೆ, ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣ ಕಳತ್ತೂರು, ಅಶೋಕ್ ಪುಣಿ ಯೂರು ಉಪಸ್ಥಿತರಿದ್ದರು.
ಯೋಜನೆಯ ಯಶಸ್ವಿಗೆ ಸಹಕರಿಸಿದ ಸಹೃದಯ ಕುಲಾಲ ಬಂಧುಗಳಿಗೆ ಕಾಸರಗೋಡು ಜಿಲ್ಲಾ ಸಂಘವು ಧನ್ಯವಾದಗಳನ್ನು ಸಮರ್ಪಿಸುತ್ತದೆ.

