ಜಾನಪದ ಕಲಾವಿದ ಶ್ರೀ ಗುಡ್ಡಪ್ಪ ಜೋಗಿ ಅವರಿಗೆ ಪ್ರತಿಷ್ಠಿತ ‘ಚುಂಚಶ್ರೀ ಪ್ರಶಸ್ತಿ’ ಗೌರವ

0
20
-ಮಂದಾರ ರಾಜೇಶ್

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನೇತೃತ್ವದಲ್ಲಿ ಪ್ರತಿವರ್ಷದಂತೆ ಆಯೋಜಿಸಲಾದ ರಾಜ್ಯಮಟ್ಟದ ಜಾನಪದ ಸಮ್ಮೇಳನದಲ್ಲಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸೂರು ನಿವಾಸಿ ಹಾಗೂ ಹಿರಿಯ ಜನಪದ ಕಲಾವಿದ ಶ್ರೀ ಗುಡ್ಡಪ್ಪ ಜೋಗಿ ಅವರಿಗೆ ಈ ಬಾರಿಯ ‘ಚುಂಚಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

​ಸಮಾರಂಭದ ಪ್ರಮುಖ ವಿವರಗಳು:

ಸೆಪ್ಟೆಂಬರ್ 24 ರಂದು ನಡೆದ ಸಮಾರಂಭ.

​ಪ್ರಶಸ್ತಿ ಪ್ರದಾನ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯರಾದ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯ ಸಮ್ಮುಖದಲ್ಲಿ ಮಠದ ಯತಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

​ಪುರಸ್ಕಾರ ವಿವರ: ಒಟ್ಟು ನಾಲ್ವರು ಹಿರಿಯ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿ ಫಲಕದೊಂದಿಗೆ ತಲಾ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರವನ್ನು ಒಳಗೊಂಡಿದೆ.

​ಅಭಿನಂದನೆ : ನಾಡಿನ ಜನಪದ ಕಲೆಗೆ ಸಲ್ಲಿಸಿದ ವಿಶಿಷ್ಠ ಸೇವೆಯನ್ನು ಗುರುತಿಸಿ ‘ಚುಂಚಶ್ರೀ ಪ್ರಶಸ್ತಿ’ ಪಡೆದ ಕಲಾವಿದ ಶ್ರೀ ಗುಡ್ಡಪ್ಪ ಜೋಗಿ ಹಾಗೂ ಇತರೆ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ್ ಹಾಗೂ ಅವರ ಬಳಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಜನಪದ ಪರಿಷತ್ತು ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈ ಲ್ ಶುಭ ಹಾರೈಸಿ ಮಾಹಿತಿಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.