ದೆಂದೂರುಕಟ್ಟೆ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್ಸಿಗೆ ಬೆಂಕಿ

0
36

ಉಡುಪಿ: ತಾಲೂಕು ದೆಂದೂರುಕಟ್ಟೆಯ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ ನಲ್ಲಿ ಶುಕ್ರವಾರ ಬೆಳಗ್ಗೆ ನಸುಕಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಉಡುಪಿ -ಮೂಡುಬೆಳ್ಳೆ- ಕಾರ್ಕಳ ಮಾರ್ಗದ ಕೃಷ್ಣಪ್ರಸಾದ್ ಹೆಸರಿನ ಸರ್ವೀಸ್ ಬಸ್ನಲ್ಲಿ ಬೆಳಗಿನ ಜಾವ 3:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಗೆ ಬೆಂಕಿ ತಗುಲಿದ್ದು ಹೇಗೆಂಬ ಮಾಹಿತಿ ಲಭಿಸಿಲ್ಲ.