ಪಾದರಕ್ಷೆಗಳ ಸಂಗ್ರಹ ಅಭಿಯಾನ: ಗ್ರೀನ್ ಸೋಲ್ ಫೌಂಡೇಶನ್ ಸ್ಥಾಪಕ ಶ್ರೀಯಾಂಶ್ ಭಂಡಾರಿಗೆ ಸನ್ಮಾನ

0
3

ಉಡುಪಿ : ಎಂ.ಜಿ.ಎಂ. ಕಾಲೇಜಿನಲ್ಲಿ ನಡೆದ ‘ನಡಿಗೆ – ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ’ ಎಂಬ ಪಾದರಕ್ಷೆಗಳ ಸಂಗ್ರಹ ಅಭಿಯಾನದ ಸಂದರ್ಭದಲ್ಲಿ ಗ್ರೀನ್ ಸೋಲ್ ಫೌಂಡೇಶನ್‌ನ ಸ್ಥಾಪಕರಾದ ಶ್ರೀಯಾಂಶ್ ಭಂಡಾರಿ ಅವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಭಿಯಾನದ ನೇತೃತ್ವ ವಹಿಸಿದ ನಿರೂಪಕ ಅವಿನಾಶ್ ಕಾಮತ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಸಂಚಾಲಕ ರವಿರಾಜ್ ಹೆಚ್.ಪಿ., ಅಧ್ಯಕ್ಷ ಪ್ರೊ. ಶಂಕರ್, ಸಂಧ್ಯಾ ಶೆಣೈ ಹಾಗೂ ರಾಘವೇಂದ್ರ ಪ್ರಭು ಕಾರ್ವಾಲ್ ಉಪಸ್ಥಿತರಿದ್ದರು.