ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಮುಖ್ಯಪ್ರಾಣ ಭವ್ಯ ಶಿಲಾ ಮೂರ್ತಿ ಪ್ರತಿಷ್ಠಾಪನ ಸಮಿತಿ ರಚನೆ

0
20


ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ದ್ವಾರಕಾಮಯಿ ಮಠ(ರಿ.) ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್(ರಿ.) ವತಿಯಿಂದ ಶ್ರೀ ಮುಖ್ಯಪ್ರಾಣ ದೇವರ ಭವ್ಯ ಶಿಲಾ ಮೂರ್ತಿಯ ಪ್ರತಿಷ್ಠಾಪನೆ 2026 ಏಪ್ರಿಲ್ ತಿಂಗಳಲ್ಲಿ ಶ್ರೀ ಕ್ಷೇತ್ರದ ಆವರಣದಲ್ಲಿ ಪ್ರತಿಷ್ಠಾಪಿಸುವುದರ ಬಗ್ಗೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಸಂಕಲ್ಪಿಸಿದರು. ಈ ಸಂಕಲ್ಪದಲ್ಲಿ ಸಕಾರಗೊಳಿಸಲು ಶ್ರೀ ಕ್ಷೇತ್ರದ ಭಕ್ತರು, ಟ್ರಸ್ಟ್, ಸೇವಾದಳವನ್ನು ಒಳಗೊಂಡ ಸಮಿತಿಯನ್ನು 2025 ಜುಲೈ 01ರ ಮಂಗಳವಾರ ರಚಿಸಲಾಯಿತು.
ಪ್ರದಾನ ಗೌರವ ಅಧ್ಯಕ್ಷರಾಗಿ ದಯಾನಂದ ಹೆಜಮಾಡಿ, ವೀಣಾ ಶೆಟ್ಟಿ, ರಾಮಪ್ಪ ಪೂಜಾರಿ ನೇಮಕಗೊಂಡರು. ಅಭಿ ರಾಜ್ ಎಂ. ಸುವರ್ಣ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಇನ್ನಂಜೆ, ಅಖಿಲೇಶ್ ಕೋಟ್ಯಾನ್ ಉಪಾಧ್ಯಕ್ಷರಾಗಿ ದರ್ಸಿತ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ, ಶ್ರೀಧರ್ ಅಮೀನ್ ಮತ್ತು ರಾಘವೇಂದ್ರ ಅಮೀನ್ ಜೊತೆ ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಕೆ. ಕೋಶಾಧಿಕಾರಿ ಹಾಗೂ ಜಯರಾಮ್ ಶೆಟ್ಟಿಗಾರ್ ಜೊತೆ ಕೋಶಾಧಿಕಾರಿ ಹಾಗೂ ಶ್ರೀ ಕ್ಷೇತ್ರ ಹಿರಿಯರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಲಾಯಿತು ಎಂದು ಮಠದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here