ತರಕಾರಿ ಮಾರುವ ಮಹಮ್ಮದ್ ಶರೀಫ್ ದುಬೈಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ.

0
19


ಬಂಟ್ವಾಳ: ಕಳೆದ ಎಂಟು ವರ್ಷಗಳಿಂದ ಬಂಟ್ವಾಳ ತಾಲೂಕಿನ 6 ಸರ್ಕಾರಿ ಶಾಲೆಗಳಿಗೆ ಬಿಸಿ ಊಟಕ್ಕೆ ತರಕಾರಿಯನ್ನು ವಿತರಿಸುವ ನಂದಾವರ ನಮ್ಮ ಶರೀಫ್ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ದುಬೈಯಲ್ಲಿ ಇಂದು ಪ್ರಧಾನ ಮಾಡಲಾಯಿತು.
ದುಬೈ ಕನ್ನಡಿಗರು ಹಾಗೂ ಮಂಜುನಾಥ ಎಜುಕೇಶನ್ ಟ್ರಸ್ಟ್ ಮಂಗಳೂರು ಇವರ ಸಹಯೋಗದಲ್ಲಿ ನಡೆದ 50ನೇ ಕನ್ನಡ ಸುವರ್ಣ ಸಂಭ್ರಮದಲ್ಲಿ ಸಾಧಕರಿಗೆ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದುಬೈ ಶೇಕ್ .ಸುಬ್ರಮಣಿ ಅಧ್ಯಕ್ಷರು .ಹಾಗೂ ಮಂಜುನಾಥ ಸಾಗರ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಈಗಾಗಲೇ ಮೊಹಮ್ಮದ್ ಶರೀಫ್ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ಈಗ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿ ಸಿಕ್ಕಿದೆ.

LEAVE A REPLY

Please enter your comment!
Please enter your name here