ಪುತ್ತೂರು : ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಪುತ್ತೂರು ವಲಯದ ನೂತನ ಕಾರ್ಯಕಾರಿ ಸಮಿತಿಯನ್ನು ಪುತ್ತೂರಿನ ಬಂಟರ ಭವನದಲ್ಲಿ ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷೆಯಾಗಿ ವೇದಾವತಿ ರಾಜೇಶ್, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿಯಾಗಿ ಪುಷ್ಪಲತಾ ಕೆ. ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯಪ್ರಕಾಶ್ ರೈ ನೂಜಿಬೈಲು, ನಯನಾ ರೈ ನೆಲ್ಲಿಕಟ್ಟೆ ಹಾಗೂ ಇಂದಿರಾ ರೈ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸಲಹೆಗಾರರಾಗಿ ದಂಬೆಕ್ಕಾನ ಸದಾಶಿವ ರೈ, ಚಂದ್ರಹಾಸ ರೈ, ಕುಂಬ್ರ ದುರ್ಗಾಪ್ರಸಾದ್ ರೈ ಹಾಗೂ ದಯಾನಂದ ರೈ ಮನವಳಿಕೆಗುತ್ತು ಅವರನ್ನು ನೇಮಕ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಪುತ್ತೂರು ವಲಯದ ಪ್ರಧಾನ ಸಂಚಾಲಕ ಮನೋಹರ ರೈ ಮನವಳಿಕೆ ಸ್ವಾಗತಿಸಿದರು. ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚ ಡ ಹಾಗೂ ತುಳು ವರ್ಲ್ಡ್ ಫೌಂಡೇಶನ್‌ನ ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ ಅವರು ತುಳು ವರ್ಲ್ಡ್ ಫೌಂಡೇಶನ್ ಮತ್ತು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಧ್ಯೇಯ, ಉದ್ದೇಶಗಳು ಹಾಗೂ ವಿವಿಧ ಚಟುವಟಿಕೆಗಳ ಕುರಿತು ವಿವರಿಸಿದರು.
ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು , ರವಿಪ್ರಸಾದ್ ಶೆಟ್ಟಿ, ಪ್ರಸನ್ನ ಶೆಟ್ಟಿ ಸಿಝ್ಲರ್, ಸೂರಜ್ ಶೆಟ್ಟಿ, ರವಿಚಂದ್ರ, ಭಾಸ್ಕರ, ಜಗನ್ನಾಥ ರೈ, ಅಜಿತ್ ರೈ ಹಾಗೂ ದಿಲ್ಲನ್ ರೈ ಉಪಸ್ಥಿತರಿದ್ದರು. ವಸಂತ ರೈ ಕುತ್ತೆತ್ತೂರು ವಂದಿಸಿದರು.

