ಕಾರ್ಕಳ: ಮಾಜಿ ಶಾಸಕ ದಿ. ಹೆಚ್ ಗೋಪಾಲ ಭಂಡಾರಿಯವರ 6ನೇ ಪುಣ್ಯಸ್ಮರಣೆಯ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಸಸಿ ವಿತರಣೆ ಕಾರ್ಯಕ್ರಮವನ್ನು ದಿನಾಂಕ 4 ಜುಲೈ ಶುಕ್ರವಾರ ಬೆಳಿಗ್ಗೆ 9:30 ರಿಂದ ದೇವಾಡಿಗ ಸುಧಾರಕರ ಸಂಘ (ರಿ) ತಾಲೂಕು ಕಚೇರಿ ಬಳಿ ಇದರ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಪಕ್ಷದ ಜಿಲ್ಲಾ ಮಟ್ಟದ ನಾಯಕರು, ಮಾಜಿ ಸಚಿವರುಗಳು, ಮಾಜಿ ಶಾಸಕರು ಮತ್ತು ಬ್ಲಾಕ್ ಮಟ್ಟದ ಪಕ್ಷದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಅಧ್ಯಕ್ಷರಾದ
ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.