ಉಡುಪಿ: : ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ಕೋಟಿ ಗೀತೆ ಲೇಖನ ಯಜ್ಞದಲ್ಲಿ ಪಾಲ್ಗೊಂಡು ಸಂಪೂರ್ಣ ಭಗವದ್ಗೀತೆಯನ್ನು ಕೇವಲ 5.30 ಗಂಟೆಗಳಲ್ಲಿ ಮುಗಿಸಿ ವಿಶ್ವದಾಖಲೆ ರಚಿಸಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಉಡುಪಿ ನಗರ ಬಿಜೆಪಿ ಒ.ಬಿ.ಸಿ. ಮೋರ್ಚಾದ ಉಪಾಧ್ಯಕ್ಷ ಸುಶಾಂತ್ ಬ್ರಹ್ಮಾವರ ಹಾಗೂ ಅವರ ಪತ್ನಿ ಸಂಜನಾ ಅವರು ಶ್ರೀಕೃಷ್ಣ ಮಠದಲ್ಲಿ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರಿಗೆ ಅರ್ಪಣೆ ಮಾಡಿದರು. ಬಿಜೆಪಿ ಒ.ಬಿ.ಸಿ.ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ ಕೊಡವೂರು, ಉಡುಪಿ ನಗರ ಒ.ಬಿ.ಸಿ. ಮೋರ್ಚಾ ಅಧ್ಯಕ್ಷ ಲಕ್ಷ್ಮೀಶ್ ಬಂಗೇರ ಮಲ್ಪೆ ಬಿ.ಜೆ.ಪಿ. ಮುಖಂಡ ಮಧುಕರ್ ಮುದ್ರಾಡಿ, ಎ.ಪಿ.ಎಂ.ಸಿ.ಅಧ್ಯಕ್ಷ ಸುಭಾಷಿತ್ ಕುಮಾರ್, ಶಬರಿಮಲೆ ಅಯ್ಯಪ್ಪ ಸಂಘದ ಜಿಲ್ಲಾಧ್ಯಕ್ಷ ರಾಧಕೃಷ್ಣ ಮೆಂಡನ್ ಉಪಸ್ಥಿತರಿದ್ದರು.