ಹಿಂಸಾತ್ಮಾಕವಾಗಿ ಪಿಕಪ್ ವಾಹನದಲ್ಲಿ ಆಕ್ರಮ ದನಸಾಗಾಟ,ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ

0
518

ಬಜಪೆ:ಮೂಡಬಿದಿರೆ ಕಡೆಯಿಂದ ಕೈಕಂಬ ಕಡೆಗೆ ಸೂರಲ್ಪಾಡಿ ಮಾರ್ಗವಾಗಿ 19 ದನಗಳನ್ನು ಪಿಕಪ್ ವಾಹನದಲ್ಲಿ ಹಿಂಸಾತ್ಮಾಕವಾಗಿ ತುಂಬಿಸಿ ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾ.28 ರಂದು ಬಜರಂಗದಳ ಕಾರ್ಯಕರ್ತರು ಸೂರಲ್ಪಾಡಿ ಬಳಿ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು.ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ನಿವಾಸಿ ಮೊಹಮ್ಮದ್ ತೌಸಿಪ್ (26) ನನ್ನು ಪೊಲೀಸರು ಬಂಧಿಸಿ 6 ಲ.ರೂ ಮೌಲ್ಯದ ಹುಂಡೈ ಕಾರನ್ನು ವಶಪಡಿಸಿಕೊಂಡಿದ್ದರು.ಘಟನೆಯ ಸಂದರ್ಭ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆಯನ್ನು ಚುರುಕುಗೊಳಿಸಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಬಂಧಿಸಿದ್ದಾರೆ.ಬಂಧಿತರನ್ನು ಮಂಗಳೂರು ತಾಲೂಕಿನ 62ನೇ ತೋಕೂರು ಗ್ರಾಮದ ನಿವಾಸಿ ಅರಾಫತ್ ಆಲಿ(36),ಮೂಡಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ನಿವಾಸಿ ಅಬ್ದುಲ್ ನಜೀರ್(31),ಬೆಳ್ತಂಗಡಿ ತಾಲೂಕಿನ ಪೆರಂತಡ್ಕ ಕಾಶೀಪಟ್ಣ ನಿವಾಸಿ ಫಾರೀಸ್ ಸಲ್ದಾನ,ಮಂಗಳೂರು ತಾಲೂಕಿನ 62 ನೇ ತೋಕೂರು ಗ್ರಾಮದ ನಿವಾಸಿ ಮೊಹಮ್ಮದ್ ಅಫ್ರಿದ್(27) ಎಂದು ಗುರುತಿಸಲಾಗಿದೆ.

ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಡಿಸಿಪಿ ಸಿದ್ದಾರ್ಥ ಗೋಯೆಲ್ (ಕಾ.ಸು) ,ಅಪರಾಧ ಮತ್ತು ಸಂಚಾರ ವಿಭಾಗದ ರವಿಶಂಕರ್ ಕೆ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಕೆ ,ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್,ಪಿ.ಎಸ್.ಐ ರೇವಣಸಿದ್ದಪ್ಪ,ಕಾವೂರು ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ,ಬಜಪೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳು,ಮಂಗಳೂರು ಉತ್ತರ ವಿಭಾಗದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here