
ಮಂಗಳೂರು : ಅಸಲಿ ಕ್ಯೂಆರ್ ಕೋಡ್‌ಗಳ ಮೇಲೆ ನಕಲಿ ಕ್ಯೂಆರ್ ಕೋಡ್ ಸ್ಟಿಕ್ಕರ್ ಅಂಟಿಸಿ ಗ್ರಾಹಕರ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಸುಮಾರು ₹12 ಲಕ್ಷ ವಂಚನೆ ನಡೆಸಿದ ಆರೋಪದ ಮೇಲೆ ಆರು ಮಂದಿಯನ್ನು ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಖಾಸಗಿ ವ್ಯಾಪಾರ ಸಂಸ್ಥೆಯೊಂದರಲ್ಲಿ ಗ್ರಾಹಕರು ಹಣ ಪಾವತಿಸಲು ಬಳಸುತ್ತಿದ್ದ ಕ್ಯೂಆರ್ ಕೋಡ್ ಸ್ಟ್ಯಾಂಡ್‌ಗಳನ್ನು ಆರೋಪಿಗಳು ಗುರಿಯಾಗಿಸಿಕೊಂಡಿದ್ದರು. ಅಸಲಿ ಕ್ಯೂಆರ್ ಕೋಡ್‌ನ ಮೇಲ್ಭಾಗದಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿದ್ದ ನಕಲಿ ಕ್ಯೂಆರ್ ಕೋಡ್‌ಗಳನ್ನು ಅಂಟಿಸಿದ್ದರು. ಗ್ರಾಹಕರು ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿದಾಗ ಮೊತ್ತವು ಸಂಸ್ಥೆಯ ಖಾತೆಗೆ ಬದಲಾಗಿ ಆರೋಪಿಗಳ ಖಾತೆಗೆ ಜಮೆಯಾಗುತ್ತಿತ್ತು.
ಸಂಸ್ಥೆಯ ಲೆಕ್ಕಪರಿಶೋಧನೆ ವೇಳೆ ಆನ್‌ಲೈನ್ ಪಾವತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾರ್ತಿಕ್, ಚೇತನ್, ಪ್ರಜ್ವಲ್, ಧನುಷ್, ಸಂದೀಪ್ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳು, ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ವಂಚಿಸಿದ ಹಣದಿಂದ ಖರೀದಿಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕ್ಯೂಆರ್ ಕೋಡ್ ಪರಿಶೀಲಿಸಲು ಪೊಲೀಸರ ಸೂಚನೆ
ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುವ ವ್ಯಾಪಾರಿಗಳು ಹಾಗೂ ಸಂಸ್ಥೆಗಳು ತಮ್ಮ ಕ್ಯೂಆರ್ ಕೋಡ್ ಸ್ಟ್ಯಾಂಡ್‌ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಅಸಲಿ ಕ್ಯೂಆರ್ ಕೋಡ್‌ಗಳ ಮೇಲೆ ನಕಲಿ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪಾವತಿ ಸ್ವೀಕರಿಸುವಾಗ ಹಣ ಸರಿಯಾದ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
