ಖ್ಯಾತ ನೇತ್ರ ತಜ್ಞ ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ಕಾರ್ಕಳ ಇವರ ವತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ

0
49

ಹಿತೈಷಿ,ಜಿ.ಎಸ್.ಬಿ. ಕಾರ್ಕಳ ಹಾಗೂ ಖ್ಯಾತ ನೇತ್ರ ತಜ್ಞ ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ಕಾರ್ಕಳ ಇವರ ವತಿಯಿಂದ ಮೇ 11ರಂದು ಕಣ್ಣಿನ ಉಚಿತ ತಪಾಸಣಾ ಶಿಬಿರ ಕಾರ್ಕಳದ ಶ್ರೀನಿವಾಸ ಕಲಾ ಮಂದಿರ ದಲ್ಲಿ ನಡೆದಿದ್ದು ಸುಮಾರು ನೂರು ನೂರು ಜನರು ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು, ಅದರಲ್ಲಿ ಸುಮಾರು 20 ಜನರಿಗೆ ಉಚಿತವಾಗಿ ಡಾಕ್ಟರ್ ಶ್ರೀಪತಿ ಕಾಮತ್ ರವರು ಐ.ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು ,ಕನ್ನಡಕ ವಿತರಣೆಯನ್ನು ಕೆ. ಕಮಲಾಕ್ಷ ಕಾಮತ್ ರವರು ದಿನಾಂಕ ಜೂನ್ 14 ಶನಿವಾರದಂದು ಸಂಜೆ ಹಿತೈಷಿ ಕಾರ್ಕಳ ಸಂಸ್ಥೆಯ ಗಣ್ಯ ವ್ಯಕ್ತಿಗಳ ಉಪಸ್ಥಿತಿ ಯಲ್ಲಿ ಕನ್ನಡಕವನ್ನು ವಿತರಿಸಿ ಮಾತನಾಡಿದರೇನೆಂದರೆ ಸಮಾಜ ಸೇವೆಗಿಂತ ದೊಡ್ಡಸೇವೆ ಯಾವುದೂ ಇಲ್ಲ,ಕಾರ್ಕಳದ ಹಿತೈಷಿ ಸಂಸ್ಥೆ ಸಮಾಜ ಸೇವೆಯನ್ನು ಮಾಡುತ್ತಿದೆ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ರವರು ಐ . ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ನೀಡಿದರು. ಹಿತೈಷಿ ಸಂಸ್ಥೆಯ ಅಧ್ಯಕ್ಷ ರಾದ ಗಣಪತಿ ಕಾಮತ್, ಕೋಶಾಧಿಕಾರಿ ಕೆ. ಎಸ್.ಪ್ರಭು, ಹಿತೈಷಿ ಯ ಟ್ರಸ್ಟಿ ಅರುಣ್ ಪುರಾಣಿಕ್,ಹಾಗು ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here