ಸ್ತ್ರೀ ಸಂಘಟನೆ ತಾಕೊಡೆ ಘಟಕದಲ್ಲಿ “ಅಪ್ಪಂದಿರ ದಿನಾಚರಣೆ”

0
44


ದಿನಾಂಕ 15-06-2025 ರಂದು ಬೆಳಗಿನ ಬಲಿಪೂಜೆಯ ನಂತರ ಪವಿತ್ರ ಶಿಲುಬೆಯ ದೇವಾಲಯ ತಾಕೊಡೆ ಇಲ್ಲಿಯ ಸಭಾಭವನದಲ್ಲಿ ಅಂತರಾಷ್ಟ್ರೀಯ ಅಪ್ಪಂದಿರ ದಿನಾಚರಣೆ ಯನ್ನು ಆಚರಿಸಲಾಯ್ತು. ಸ್ತ್ರೀ ಸಂಘಟನೆಯ ಸ್ತ್ರೀಯರಿಂದ ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯ್ತು. ಸಭಾ ಕಾರ್ಯಕ್ರಮದ ಮೊದಲು ಅಲ್ಲಿ ನೆರೆದಿರುವ ಅಪ್ಪಂದಿರಲ್ಲಿ ಚೀಟಿ ತೆಗೆಯುವ ಮುಖಾಂತರ ಒಬ್ಬರಾದ ಶ್ರೀ ಸಿಲ್ವೆಸ್ಟರ್ ಪಿಂಟೊರವರು ಆ ದಿನದ ಅದೃಷ್ಟ ಅಪ್ಪ ಎಂದು ಆಯ್ಕೆಯಾದರು. ನಂತರ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಚರ್ಚ್ ಧರ್ಮಗುರುಗಳಾದ ವಂದನೀಯ ಫಾ| ರೋಹನ್ ಲೋಬೊ, ಮುಖ್ಯ ಅಥಿತಿಗಳಾಗಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಶ್ರೀ ಫ್ರಾನ್ಸಿಸ್ ಮೆಂಡೋನ್ಸಾ, ಕಾರ್ಯದರ್ಶಿ ಶ್ರೀ ಆಲ್ವಿನ್ ಪಿಂಟೊ, ಆಯೋಗ ಸಂಯೋಜಕರಾದ ಶ್ರೀ ಪಾವ್ಲ್ ಡಿಸೋಜ, ಬೆಥೆನಿ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ರೀನಾ, ನೆರೆದ ಆಪ್ಪಂದಿರ ಪರವಾಗಿ ಶ್ರೀ ಸಿಲ್ವೆಸ್ಟರ್ ಪಿಂಟೊ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸಬಿತಾ ರೋಡ್ರಿಗಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಐವಿ ಕ್ರಾಸ್ತಾ, ಕಾರ್ಯದರ್ಶಿ ಶ್ರೀಮತಿ ಶಾಂತಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಐವಿ ಕ್ರಾಸ್ತಾ ಗಣ್ಯ ವ್ಯಕ್ತಿಗಳನ್ನು ಹಾಗೂ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಧರ್ಮಗುರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ತಾವು ಬರೆದ ಒಂದು ಕವನದ ಮುಖಾಂತರ ಒಳ್ಳೆಯ ಸಂದೇಶವನ್ನು ನೀಡಿದರು ಮಾತ್ರವಲ್ಲದೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸ್ತ್ರೀ ಸಂಘಟನೆಗೆ ಶ್ಲಾಗಿಸಿದರು. ಸ್ತ್ರೀ ಸಂಘಟನೆಯ ಸದಸ್ಯರು ಹಾಡನ್ನು ಹಾಡುವ ಮುಖಾಂತರ ನೆರೆದಿರುವ ಎಲ್ಲಾ ಅಪ್ಪಂದಿರಿಗೆ ಶುಭಕೋರಿದರು. ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀ ಆಲ್ವಿನ್ ಪಿಂಟೊ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಮ್ಮ ಚರ್ಚ್ ಪಾಲನಾ ಮಂಡಳಿಯ ಮಾಜಿ ಉಪಾಧ್ಯಕ್ಷರು ಹಾಗೂ ಪಸ್ತುತ ವಾರಾಡೊ ಸ್ತ್ರೀ ಸಂಘಟನೆಯ ಖಜಾಂಜಿಯಾಗಿರುವ ಶ್ರೀಮತಿ ಸಬಿತಾ ರೋಡ್ರಿಗಸ್ ಇವರು ಕುಟುಂಬದಲ್ಲಿ ಅಪ್ಪಂದಿರ ಮಹತ್ವದ ಬಗ್ಗೆ, ಪರದೆಯ ಹಿಂದೆ ಕುಟುಂಬಕ್ಕೋಸ್ಕರ ಅವರ ಶ್ರಮ, ತ್ಯಾಗ, ಅಮ್ಮ ಇಲ್ಲದೇ ಇರುವ ಸಮಯದಲ್ಲಿ ಅವರ ಒಂಟಿತನವನ್ನು ಲೆಕ್ಕಿಸದೆ ಮಕ್ಕಳ ಲಾಲನೆ -ಪಾಲನೆ ಹೀಗೆ ಉತ್ತಮ ಸಂದೇಶವನ್ನು ನೀಡಿದರು. ನಂತರ ಸ್ತ್ರೀ ಸಂಘಟನೆಯ ಸ್ರೀಯರಾದ ಶ್ರೀಮತಿ ಲೀಜಾ ರೋಡ್ರಿಗಸ್, ಶಾಂತಿ ಪಿಂಟೊ ಹಾಗೂ ಸಬಿತಾ ರೋಡ್ರಿಗಸ್ ಇವರು ವಿವಿಧ ಆಟಗಳನ್ನು ನೆರವೇರಿಸಿದರು ಆಟದಲ್ಲಿ ವಿಜೇತರಾದವರಿಗೆ ಬ್ರದರ್ ಜೋನ್ಸನ್ ಕ್ರಾಸ್ತಾ ಇವರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಅಂತೆಯೇ ಘಟಕದ ಸ್ತ್ರೀಯರು ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ನೀಡುವುದರೊಂದಿಗೆ ಅಲ್ಲಿ ನೆರೆದ ಅಪ್ಪಂದಿರನ್ನು ಮನೋರಂಜಿಸಿದರು. ಸಿಸ್ಟರ್ ರೀನಾ ಇವರು ಭೋಜನದ ಮೇಲೆ ಆಶೀರ್ವಾಚನ ಮಾಡಿದರು. ಘಟಕದ ಉಪಾಧ್ಯಕ್ಷರು ಶ್ರೀಮತಿ ರೇಶ್ಮಾ ಲೋಬೊ ಕಾರ್ಯಕ್ರಮ ನಿರೂಪಿಸಿದರು ಘಟಕದ ಕಾರ್ಯದರ್ಶಿ ಶ್ರೀಮತಿ ಶಾಂತಿ ಪಿಂಟೊ ವಂದನಾರ್ಪಣೆ ಮಾಡಿದರು. ಮಧ್ಯಾಹ್ನದ ಭೋಜನ ಸವಿಯುವುದರೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

LEAVE A REPLY

Please enter your comment!
Please enter your name here