ಮೂಡುಬಿದಿರೆ ಸಮೀಪದ ಕೇಸರ್ ಗದ್ದೆಯ ಸುನಂದಾ ಮಾಧವ ಪ್ರಭು ಸಭಾ ಭವನದಲ್ಲಿ ಮಿಜಾರು ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಳ್ವಾಸ್ ಆನಂದಮಯ ಆರೋಗ್ಯಧಾಮ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಮೇ 3ರಂದು ನಡೆಯಿತು. ಶಿಬಿರದ ಉದ್ಘಾಟನೆಯನ್ನು ಎಂ ದಯಾನಂದ ಪೈ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಶುಭ ಹಾರೈಸಿದರು. ರಘುವೀರ ಶೆಣೈಯವರು ಅಧ್ಯಕ್ಷತೆ ವಹಿಸಿದ್ದರು.
ಭಜನಾ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಕಾಮತ್, ಎಂ ರಾಘವೇಂದ್ರ ಭಂಡಾರ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು .ಕಾಲೇಜಿನ ವೈದ್ಯೆ ಅಸೋಸಿಯೇಟ್ ಪ್ರೊಫೆಸರ್ ಮತ್ತು ಮೆಡಿಕಲ್ ಆಫೀಸರ್ ಡಾ ಸ್ವಾತಿ ಕೆ.ವಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ.ಶ್ರೀನಿವಾಸ ಶೆಣೈ ಅವರು ಮಾತನಾಡುತ್ತಾ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯಲ್ಲಿನ ರೋಗ ನಿರೋಧಕ ಶಕ್ತಿ ಹಾಗೂ ಕಾಯಿಲೆಯನ್ನು ಹತೋಟಿಯಲ್ಲಿಡುವುದರ ಜೊತೆಗೆ ಸಂಪೂರ್ಣವಾಗಿ ಗುಣಪಡಿಸುವ ಶಕ್ತಿ ಪ್ರಾಚೀನ ಮತ್ತು ಪರಂಪರಾಗತ ಪದ್ಧತಿಯಾದ ಈ ನಮ್ಮ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿದೆ. ಈ ನಿಟ್ಟಿನಲ್ಲಿ ಇಂತಹ ಶಿಬಿರದ ಮಹತ್ವವನ್ನು ಅರಿತು ಜನರು ಇದರ ಸದುಪಯೋಗ ಪಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ವೈದ್ಯಕೀಯ ವಿದ್ಯಾರ್ಥಿನಿ ಭೂಮಿಕಾ ಟಿ ಮನೆಕೋಟಿ ಸ್ವಾಗತಿಸಿದರು. ಗಣ್ಯರಾದ ಕೃಷ್ಣ ಶೆಣೈ , ನಿರ್ಮಲಾ ಆರ್ ಕಾಮತ್, ವಿವೇಕ ಪ್ರಭು, ವಿಠ್ಠಲ ಪ್ರಭು ,ನಿತಿನ್ ಕಾಮತ್, ಪ್ರದ್ಯೋತ್ ಪ್ರಭು, ಸುಕುಮಾರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ

