ಸುವರ್ಣ ಮಹೋತ್ಸವದ ಅಂಗವಾಗಿ ಶಿರ್ವ ಸಹಕಾರಿ ಸಂಘದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0
47

ಶಿರ್ವ : ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಶಿರ್ವ, ಸುವರ್ಣ ಮಹೋತ್ಸವ ವರ್ಷ- 2026 ಸ್ಥಳೀಯ ಶಿರ್ವ ಸಹಕಾರಿ ವ್ಯವಸಾಯನಿಕ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಒಂದಾದ ಅಪೋಲೋ ಮೆಡಿಕಲ್ ಸಹಯೋಗದೊಂದಿಗೆ ಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ನೆರವೇರಿಸಿದರು.

ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಚಾಲಕರು ಮತ್ತು ಸಂಘದ ನಿರ್ದೇಶಕರಾದ ಉಮೇಶ್ ಆಚಾರ್ಯ, ಮತ್ತೋರ್ವ ನಿರ್ದೇಶಕರಾದ ಗಣೇಶ ನಾಯ್ಕ್ , ಅಪೋಲೋ ಮೆಡಿಕಲ್ ತಂಡದ ಕುಮಾರಿ ಶಿಲ್ಪಾ ಉಪಸ್ತಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.