ಮೂಡುಬಿದಿರೆ : ಮೂಡುಮಾರ್ನಾಡು ಪಿ.ಎಂ.ಶ್ರೀ. ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಮಕ್ಕಳ ಗುರುತುಕಾರ್ಡು ಹಾಗೂ ನೋಟ್ ಪುಸ್ತಕ ವಿತರಣೆ ಮಾಡುವ ಸಮಾರಂಭ ನಡೆಯಿತು. ಇವುಗಳನ್ನು ಉಡುಪಿ ಜಿಲ್ಲೆಯ ಜಿ.ಎಸ್.ಬಿ.ಸಮಾಜ ಹಿತರಕ್ಷಣಾ ವೇದಿಕೆ(ರಿ) ಪ್ರಾಯೋಜಿಸಿತ್ತು.
ವೇದಿಕೆಯ ಪರವಾಗಿ ವಿದ್ಯಾಪೋಷಕ್ ಸಮಿತಿಯ ಸಂಚಾಲಕರಾಗಿರುವ ವಿಜಯ ವಿಶ್ವನಾಥ್ ಶೆಣೈ ಸಮಾರಂಭದಲ್ಲಿ ಹಾಜರಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಸಾಧನೆಗಳನ್ನು ಪ್ರಶಂಸಿಸಿ, ಶಾಲೆಯ ಅಭಿವೃದ್ಧಿಗೆ ವೇದಿಕೆಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಶಾಲೆಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು.

ಗಣಿತ ಶಿಕ್ಷಕಿ ಸುಮಿತಾ ಅವರು ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕಿ ಛಾಯಾ ಕಿಣಿ ಧನ್ಯವಾದ ಸಮರ್ಪಿಸಿದರು. ಸಮಾಜವಿಜ್ಞಾನ ಶಿಕ್ಷಕ ಜೋನ್ ರೊನಾಲ್ಡ್ ಕಾರ್ಯಕ್ರಮ ನಿರ್ವಹಿಸಿದರು.

