ಬ್ರಹ್ಮಾವರ : ಉಡುಪಿ ಜಿಲ್ಲೆಯ 52ನೇ ಹೇರೂರು, ಬ್ರಹ್ಮಾವರದಲ್ಲಿರುವ ರೂಡ್‌ಸೆಟಿ (RUDSETI) ಸಂಸ್ಥೆಯು 2026-27ನೇ ಸಾಲಿನಲ್ಲಿ ಯುವಕರು ಹಾಗೂ ಮಹಿಳೆಯರ ಸ್ವಯಂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಉಚಿತ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ತರಬೇತಿ ಅವಧಿಯಲ್ಲಿ ವಸತಿ, ಊಟ ಹಾಗೂ ತರಬೇತಿ ಸಂಪೂರ್ಣ ಉಚಿತವಾಗಿದ್ದು, 18 ರಿಂದ 50 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಆಯೋಜಿಸಲಾದ ತರಬೇತಿಗಳು
- ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಸರ್ವೀಸ್ – ಆಗಸ್ಟ್ 13 ರಿಂದ ಸೆಪ್ಟೆಂಬರ್ 12 (30 ದಿನ)
- ಸಿಸಿ ಕ್ಯಾಮೆರಾ ರಿಪೇರಿ, ಸರ್ವೀಸ್ ಹಾಗೂ ಅಳವಡಿಕೆ – ಆಗಸ್ಟ್ 17 ರಿಂದ 29 (13 ದಿನ)
- ಮಹಿಳಾ ಟೈಲರಿಂಗ್ ತರಬೇತಿ – ಆಗಸ್ಟ್ 27 ರಿಂದ ಸೆಪ್ಟೆಂಬರ್ 26 (31 ದಿನ)
- ಅಣಬೆ ಬೇಸಾಯ ತರಬೇತಿ – ಸೆಪ್ಟೆಂಬರ್ 21 ರಿಂದ 30 (10 ದಿನ)
- ಕೋಳಿ ಸಾಕಾಣಿಕೆ ತರಬೇತಿ – ಅಕ್ಟೋಬರ್ 5 ರಿಂದ 16 (12 ದಿನ)
- ಕೃತಕ ಆಭರಣ ತಯಾರಿಕೆ ತರಬೇತಿ – ಅಕ್ಟೋಬರ್ 3 ರಿಂದ 16 (13 ದಿನ)
- ಎಂಬ್ರಾಯ್ಡರಿ ತರಬೇತಿ – ಅಕ್ಟೋಬರ್ 27 ರಿಂದ ನವೆಂಬರ್ 26 (31 ದಿನ)
- ಫಾಸ್ಟ್ ಫುಡ್ ತಯಾರಿಕೆ ತರಬೇತಿ – ಡಿಸೆಂಬರ್ 8 ರಿಂದ 19 (12 ದಿನ)
- ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ – ಡಿಸೆಂಬರ್ 10 ರಿಂದ ಜನವರಿ 14 (35 ದಿನ)
- ಮಹಿಳೆಯರ ಟೈಲರಿಂಗ್ ತರಬೇತಿ – ಡಿಸೆಂಬರ್ 30 ರಿಂದ ಜನವರಿ 29 (31 ದಿನ)
ಕೌಶಲ್ಯದ ಜೊತೆಗೆ ಉದ್ಯಮಶೀಲತಾ ತರಬೇತಿ
ತರಬೇತಿ ವೇಳೆ ತಾಂತ್ರಿಕ ಕೌಶಲ್ಯದ ಜೊತೆಗೆ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಸಮಯ ಪಾಲನೆ, ಬ್ಯಾಂಕಿಂಗ್, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ.
ಇದಲ್ಲದೆ, ಸ್ವಯಂ ಉದ್ಯೋಗ ಆರಂಭಿಸಲು ಅಗತ್ಯವಿರುವ ಬ್ಯಾಂಕ್ ಸಾಲ, ಸರ್ಕಾರಿ ಯೋಜನೆಗಳು ಹಾಗೂ ಹಣಕಾಸು ನೆರವು ಪಡೆಯುವ ಕುರಿತು ಮಾರ್ಗದರ್ಶನವೂ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ನೋಂದಣಿ ಹೇಗೆ?
ಆಸಕ್ತರು ತಮ್ಮ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಆಯ್ಕೆ ಮಾಡಿದ ತರಬೇತಿಯ ವಿವರವನ್ನು ವಾಟ್ಸಾಪ್ ಮೂಲಕ ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- 98440 86383
- 70225 60492
- 95912 33748
- 99008 89234
ಅಥವಾ
ಡಾ. ಬೊಮ್ಮಯ್ಯ ಎಂ.
ನಿರ್ದೇಶಕರು, ರೂಡ್‌ಸೆಟಿ (RUDSETI)
52ನೇ ಹೇರೂರು, ಬ್ರಹ್ಮಾವರ, ಉಡುಪಿ ಜಿಲ್ಲೆ
ಮೊ.: 94498 62808
ಸ್ವಯಂ ಉದ್ಯೋಗದ ಕನಸು ಹೊಂದಿರುವ ಯುವಕರು ಹಾಗೂ ಮಹಿಳೆಯರು ಈ ಉಚಿತ ತರಬೇತಿ ಶಿಬಿರಗಳ ಪ್ರಯೋಜನ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.
