ಮಣಿಪಾಲದಲ್ಲಿ ದೇಶಿ ನಾಯಿಗಳಿಗೆ ಉಚಿತ ಸಂತಾನಹರಣ ಶಸ್ತ್ರಚಿಕಿತ್ಸೆ

0
64

ಮಣಿಪಾಲ : ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ (MACT), ಮಣಿಪಾಲ ಹಾಗೂ WVS ಇಂಡಿಯಾ ಸಹಯೋಗದಲ್ಲಿ ದೇಶಿ ನಾಯಿಗಳಿಗೆ ಉಚಿತ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 12ರಿಂದ 17ರವರೆಗೆ ಮಣಿಪಾಲ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಈ ಶಿಬಿರ ನಡೆಯಲಿದ್ದು, ದೇಶಿ ನಾಯಿಗಳ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಶಿಬಿರಕ್ಕೆ ಗ್ರಾಸ್‌ಲ್ಯಾಂಡ್ ಡೆವಲಪರ್ಸ್, ಉಡುಪಿ, ವನಿತಾ ಪೈ, ಮಣಿಪಾಲ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (AHVS), ಉಡುಪಿ ಸಹಕಾರ ನೀಡುತ್ತಿವೆ.

ನೋಂದಣಿಗಾಗಿ ಸಂಪರ್ಕಿಸಿ:
📞 82775 03802
📞 82773 90909