ಮಲ್ಪೆ” ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ , ಶ್ರೀ ಹನುಮ ದೇವರ ಪ್ರತಿಷ್ಠೆ ಗೊಂಡು 25 ವರ್ಷದ ರಜತ ಮೊಹೋತ್ಸವ ಆಚರಣೆ ಹಾಗೂ ಶ್ರೀ ಹನುಮ ಜಯಂತಿ ಮಹೋತ್ಸವ ಆಚರಣೆ ಎ 12 . ಶನಿ ವಾರ ವಿಜೃಂಭಣೆ ಯಿಂದ ನಡೆಯಲಿದೆ ಶ್ರೀ ಹನುಮ ಜಯಂತಿ ಅಂಗವಾಗಿ ಶ್ರೀ ದೇವರಿಗೆ 108 ಪವಮಾನ ಕಲಶಾಭಿಷೇಕ, 108 ಸೀಯಾಳ ಅಭಿಷೇಕ, 1008 ಲಡ್ಡು ಮಹಾ ನೈವೇದ್ಯ, ಶ್ರೀದೇವರಿಗೆ ವಿಶೇಷ ಅಲಂಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸೌಮ್ಯ ಕಿಣಿ ಕಲ್ಯಾಣಪುರ ಇವರಿಂದ ಭಜನಾ ಕಾರ್ಯಕ್ರಮ , ಪಲ್ಲ ಪೂಜೆ , ಮಹಾ ಪೂಜೆ ಬಳಿಕ ಮಹಾ ಸಮಾರಾಧನೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ ರಾತ್ರಿ ಶ್ರೀದೇವರಿಗೆ ರಂಗ ಪೂಜೆ ಬಳಿಕ ರಜತ ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ