ಮಂಗಳೂರು : ದಿನಾಂಕ 27-6-26 ಶನಿವಾರ ಸಂಜೆ 4 ಗಂಟೆಯಿಂದ 10ಗಂಟೆ ವರೆಗೆ ಮಂಗಳೂರಿನ ಪ್ರತಿಷ್ಠಿತ ಹೋಟೆಲ್ ಸೀ ವ್ಯೂ ಲ್ಲಿ ಗಾನ ಲಹರಿ ಮೆಲೋಡಿಸ್ ಉರ್ವ ಮಂಗಳೂರು ತಂಡದಿಂದ ಸಂಗೀತ ರಸಮಂಜರಿ ಏರ್ಪಡಿಸಲಾಗಿತ್ತು ತಂಡದ ಗಾಯಕ ಮನೋಹರ್ ಕುಮಾರ್ ಪ್ರಾರ್ಥನೆಯೊಂದಿಗೆ ಗಾಯನ ಕಾರ್ಯಕ್ರಮ ಆರಂಭವಾಯಿತು.

ತಂಡದ ವಿವಿಧ ಗಾಯಕ ಗಾಯಕಿಯರು ಸುಸ್ರಾವ್ಯ ವಾಗಿ ಹಾಡಿ ತಮ್ಮ ಗಾಯನ ಪ್ರತಿಭೆ ಪ್ರದರ್ಧಿಸಿದರು.ಗಾಯಕಿ ಹಾಗೂ ನೃತ್ಯಗಾತಿ ಪದ್ಮಿನಿ ಕುಂದರ್ ತಮ್ಮ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು Father’s Day ಪ್ರಯುಕ್ತ cake cutting ಮಾಡಿ ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಯಿತು ತಂಡದ ಸಲಹೆಗಾರರು ಹಾಗೂ ಶನ ಸೌಂಡ್ಸ್ ನ ಮಾಲಕ ಗಾಯಕ ಸಂತೋಷ್ ಅಂಚನ್ ಸೇರಿದಂತೆ ತಂಡದ ಮಾಲೀಕರಾದ ಸರೋಜಾ ರಾವ್ ಕಾರ್ಯಕ್ರಮವನ್ನು ಆಯೋಜಿಸಿದ್ದರು ಇಂಪಾದ ಗಾಯನ ಹಾಗೂ ರಾತ್ರಿ ಭೋಜನ ದೊಂದಿಗೆ ರಸಮಂಜರಿ ಮುಕ್ತಾಯಗೊಂಡಿತು.

