ಯೋಚನೆಗೂ ಮೀರಿದ ಯಶಸ್ಸು ಕಂಡ “ಗಜಾನನ ಕ್ರಿಕೆಟರ್ಸ್”

0
23

ಮೊದಲ ಮೂರು ದಿನಗಳಲ್ಲಿ 75ಕ್ಕೂ ಅಧಿಕ ಹೌಸ್‌ಫುಲ್ ಪ್ರದರ್ಶನ; ನೂಕುನುಗ್ಗಲಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು

ಕರಾವಳಿ ಭಾಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ “ಗಜಾನನ ಕ್ರಿಕೆಟರ್ಸ್” ಸಿನಿಮಾ ಬಿಡುಗಡೆಯಾದ ಮೊದಲ ದಿನಗಳಿಂದಲೇ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಬಿಗ್ಗೆಸ್ಟ್ ಓಪನಿಂಗ್ ಪಡೆದಿರುವ ಈ ಚಿತ್ರ, ಮೊದಲ ಮೂರು ದಿನಗಳಲ್ಲಿ 75ಕ್ಕೂ ಅಧಿಕ ಹೌಸ್‌ಫುಲ್ ಪ್ರದರ್ಶನ ಕಂಡಿರುವುದಾಗಿ ಸಿನಿರಸಿಕರು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರಮಂದಿರಗಳ ಮುಂದೆ ಭಾರೀ ಜನಸಂದಣಿ ಕಂಡುಬಂದಿದ್ದು, ಹಲವೆಡೆ ಟಿಕೆಟ್‌ಗಾಗಿ ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ ಪ್ರೇಕ್ಷಕರು ಹೊಟ್ಟೆ ತುಂಬ ನಕ್ಕು ಮನರಂಜನೆ ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿನೂತನ ಕಥಾಹಂದರ, ಹಾಸ್ಯಭರಿತ ದೃಶ್ಯಗಳು, ಸ್ಥಳೀಯ ಸೊಗಡು ಹಾಗೂ ಕ್ರಿಕೆಟ್ ಹಿನ್ನೆಲೆಯ ಕಥೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಿನಿಮಾದ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದಾರೆ.

“ಗಜಾನನ ಕ್ರಿಕೆಟರ್ಸ್” ಚಿತ್ರದ ಯಶಸ್ಸಿನಿಂದ ಕರಾವಳಿ ಸಿನಿರಂಗದಲ್ಲೂ ಹೊಸ ಸಂಚಲನ ಮೂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here