ತುಳುನಾಡ ತುಳುವೆರ್ ಕಲ್ಯಾಣ್ ಮಹಿಳಾ ವಿಭಾಗದಿಂದ ಗಣೇಶ ಚತುರ್ಥಿ ಅಂಗವಾಗಿ ಭಜನೆ

0
82

ಕಲ್ಯಾಣ್ : ಕಲ್ಯಾಣ್ ಪೂರ್ವದ ಹನುಮಾನ್ ನಗರದ ಸಾಯಿನಾಥ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ಪದ್ಮಾ ಸುವರ್ಣರ ಸ್ವಗ್ರಹದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ತುಳುನಾಡ ತುಳುವೆರ್ , ಕಲ್ಯಾಣ್ ಇದರ ಸಂಸ್ಥಾಪಕ ಅಶೋಕ್ ಎಲ್ . ಪೂಜಾರಿ ಉಲ್ಯ ಗುತ್ತು ಪಂಜ – ಕೊಯಿಕುಡೆ ಇವರನ್ನು ಶಾಲು ಹೊದೆಸಿ ಫಲ ಪುಷ್ಪ ನೀಡಿ ಸನ್ಮಾನ ಮಾಡಲಾಯಿತು.


ಭಜನಾ ಕಾರ್ಯಕ್ರಮದಲ್ಲಿ ಪದ್ಮಾ ಸುವರ್ಣ ಮತ್ತು ತುಳುನಾಡ ತುಳುವೆರೆ, ಕಲ್ಯಾಣ್ ಇದರ ಮಹಿಳಾ ಸದಸ್ಯೆರುಗಳಾದ ಅಂಜನಾ ಪೂಜಾರಿ , ಸುಮಿತ್ರ ಪೂಜಾರಿ , ಶ್ರೀಮತಿ ಸುವರ್ಣ, ಬಿನಾ ಸಾಲಿಯಾನ್, ಖುಷಿ ಸಾಲಿಯಾನ್, ತುಳಸಿ ಕೋಟಿಯನ್ , ಅಶ್ವಿನ್ ಕೋಟಿಯನ್, ಸಿದ್ಧಿ ಕೋಟಿಯನ್, ಶಶಿ ಪೂಜಾರಿ, ಜಯಂತಿ ಪೂಜಾರಿ, ಜಾನಕಿ ಪೂಜಾರಿ , ದೀಪ ಪೂಜಾರಿ, ಗಣೇಶ್ ಸುವರ್ಣ, ಭಾಸ್ಕರ್ ಸುವರ್ಣ , ದರ್ಶನ್ ಪೂಜಾರಿ ಮತ್ತು ಪ್ರಮೋದ್ ಸಾಲಿಯಾನ್ ಉಪಸ್ಥಿತರಿದ್ದರು.
ಭಜನೆ ಕಾರ್ಯಕ್ರಮದ ನಂತರ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಪ್ರೀತಿಭೋಜನ ನಡೆಯಿತು.