ಬಂಟ್ವಾಳ : ಇಲ್ಲಿನ ಪಂಜಿಕಲ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಸಾಂಪ್ರದಾಯಿಕ ‘ಸೋಣ ನೇಮ’ (ಹಗಲು ನೇಮೋತ್ಸವ) ಭಾನುವಾರ ಮಧ್ಯಾಹ್ನ ನೆರವೇರಿತು.
ಇದೇ ವೇಳೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ ಆರ್.ಪೂಜಾರಿ, ಜಿ. ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಪ್ರಧಾನ ಅರ್ಚಕ ಶ್ರೀಪತಿ ಭಟ್ ಪುಂಚೋಡಿ,
ಪ್ರಮುಖರಾದ ಕೃಷ್ಣ ರಾಜ್ ಜೈನ್ ಪಂಜಿಕಲ್ಲು ಗುತ್ತು , ಪ್ರಕಾಶ್ ಕುಮಾರ್ ಜೈನ್ ಪೀರ್ದೊಟ್ಟು ಗುತ್ತು, ಜಗದೀಶ್ ಚೌಟ ಬಾಲೇಶ್ವರ ಗುತ್ತು, ಕೋಟಿ ಪೂಜಾರಿ ಕೇಳ್ದೋಡಿ ಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿ ಆರ್. ಪೂಜಾರಿ ಪಾರೊಟ್ಟು, ಕೋಶಾಧಿಕಾರಿ ಬಿ. ಜಯ ಕುಂದರ್, ಕಾರ್ಯದರ್ಶಿ ರಾಜೇಶ್ ಗೌಡ ತಿಮರೋಡಿ, ಕೇಶವ ಪೂಜಾರಿ ಅಸಲ್ಡೋಡಿ, ಗಣೇಶ್ ಪ್ರಭು ಭಾವಂತಬೆಟ್ಟು, ಕರುಣೇoದ್ರ ಪೂಜಾರಿ ಕೊಂಬ್ರಬೈಲು, ಪ್ರಕಾಶ್ ಮಡಿವಾಳ ಕಾಪಿಕಾಡ್ ಮತ್ತಿತರರು ಇದ್ದರು.

