ಮಂಗಳೂರು : ಗಣೇಶ ಚತುರ್ಥಿಯ ಪ್ರಯುಕ್ತ ಮಂತ್ರಾಕ್ಷಿ ಮೆಲೋಡೀಸ್ ವತಿಯಿಂದ ಆನ್‌ಲೈನ್ “ಗಣೇಶ ಗಾನೋತ್ಸವ” ಭಕ್ತಿಗೀತೆ ಸ್ಪರ್ಧೆ ಆಯೋಜಿಸಲಾಗಿದೆ. ವಿವಿಧ ವಯೋಮಾನದ ಮಕ್ಕಳಲ್ಲಿರುವ ಗಾಯನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. 4ರಿಂದ 6 ವರ್ಷ ಹಾಗೂ 7ರಿಂದ 10 ವರ್ಷ ವಯೋಮಾನದ ಮಕ್ಕಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧಿಗಳು ತಮ್ಮ ಗಾಯನದ ವೀಡಿಯೋವನ್ನು 16-09-2026ರೊಳಗೆ ಕಳುಹಿಸಬೇಕು. ಸ್ಪರ್ಧೆಯ ವೀಡಿಯೋಗಳನ್ನು “ಮಂತ್ರಾಕ್ಷಿ ಮೆಲೋಡೀಸ್” ಇನ್‌ಸ್ಟಾಗ್ರಾಂ ಪುಟದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಸ್ಪರ್ಧಿಗಳ ವೀಡಿಯೋಗಳಿಗೆ ಲೈಕ್ಸ್ ಪಡೆಯಲು 19-09-2026ರ ರಾತ್ರಿ 9 ಗಂಟೆಯವರೆಗೆ ಅವಕಾಶವಿದ್ದು, ಸ್ಪರ್ಧೆಯ ಫಲಿತಾಂಶವನ್ನು 20-09-2026ರಂದು ಪ್ರಕಟಿಸಲಾಗುತ್ತದೆ.
ಸ್ಪರ್ಧೆಯ ಪ್ರಮುಖ ನಿಯಮಗಳು
ಸ್ಪರ್ಧೆಯಲ್ಲಿ ಶ್ರೀ ಗಣೇಶನ ಭಕ್ತಿಗೀತೆಗಳು ಮಾತ್ರ ಪರಿಗಣಿಸಲಾಗುವುದು. ಹಾಡು ಕನ್ನಡ ಅಥವಾ ತುಳು ಭಾಷೆಯಲ್ಲಿರಬೇಕು. ಹಾಡಿನ ಅವಧಿ ಗರಿಷ್ಠ 3 ನಿಮಿಷ ಮಾತ್ರ ಇರಬೇಕು. ಸಮಯ ಮೀರಿದಲ್ಲಿ ಸ್ಪರ್ಧಿಯನ್ನು ಅನರ್ಹಗೊಳಿಸಲಾಗುವುದು.
ಸ್ಪರ್ಧಿಗಳು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಪು ಧರಿಸಬೇಕು. ವೀಡಿಯೋವನ್ನು 16:9 ಅನುಪಾತದಲ್ಲಿ ಹೊಸದಾಗಿ ಚಿತ್ರೀಕರಿಸಬೇಕು. ಹಳೆಯ ವೀಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ವೀಡಿಯೋದಲ್ಲಿ ಯಾವುದೇ ರೀತಿಯ ಎಡಿಟಿಂಗ್ ಮಾಡುವಂತಿಲ್ಲ.
ಅದೇ ರೀತಿ ಸ್ಪರ್ಧಿಗಳು ಆಟೋಟ್ಯೂನ್, ತಾಳ, ಕರೋಕೆ ಅಥವಾ ಮೈಕ್ ಬಳಸುವಂತಿಲ್ಲ. ನೈಜ ಗಾಯನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಸ್ಪರ್ಧಿಗಳು ವೀಡಿಯೋದೊಂದಿಗೆ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ವಯಸ್ಸಿನ ದಾಖಲೆಗಳನ್ನು ಕಳುಹಿಸುವುದು ಕಡ್ಡಾಯವಾಗಿದೆ.
ಅತ್ಯಧಿಕ ಲೈಕ್ಸ್‌ಗೂ ವಿಶೇಷ ಬಹುಮಾನ
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ಜೊತೆಗೆ ಅತ್ಯಧಿಕ ಲೈಕ್ಸ್ ಪಡೆದ ಎರಡು ವೀಡಿಯೋಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.
ಫೇಕ್ ಲೈಕ್ಸ್ ಅಥವಾ ಪೇಡ್ ಲೈಕ್ಸ್‌ಗಳನ್ನು ತಡೆಯುವ ಉದ್ದೇಶದಿಂದ ಸ್ಪರ್ಧೆಯ ಅವಧಿಯಲ್ಲಿ ಸಂಬಂಧಿತ ಇನ್‌ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸ್ಪರ್ಧಿಗಳ ಆಯ್ಕೆಯಲ್ಲಿ ವೀಡಿಯೋ ಮತ್ತು ಆಡಿಯೋ ಕ್ಲಾರಿಟಿ, ಉಚ್ಚಾರಣೆ, ಸಾಹಿತ್ಯದ ಸ್ಪಷ್ಟತೆ, ಭಾವನೆ ಮತ್ತು ಭಕ್ತಿಭಾವ ಹಾಗೂ ಒಟ್ಟಾರೆ ಪ್ರಸ್ತುತಿಯನ್ನು ಪರಿಗಣಿಸಲಾಗುವುದು. ತೀರ್ಪುಗಾರರ ತೀರ್ಪೇ ಅಂತಿಮವಾಗಿರುತ್ತದೆ.
ಸ್ಪರ್ಧೆಯ ಬಹುಮಾನ ಹಾಗೂ ಪ್ರಶಸ್ತಿ ವಿತರಣೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿಜೇತರ ವಿಳಾಸಕ್ಕೆ ಕಳುಹಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 8217544975 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

