
ಕಲಾಯ್ಸ್ ಅಲ್ಫೇನ್ ಗಂಗೊಳ್ಳಿ, ನೂರ್ ಕ್ರಿಕೆಟರ್ಸ್ ಗಂಗೊಳ್ಳಿ, ಹಾಗೂ ನಮ್ಮ ನಾಡ ಒಕ್ಕೂಟ (ರಿ). ಇವರುಗಳ ಆಶ್ರಯದಲ್ಲಿ ಎನ್ಎನ್ ಓ ಕಪ್ 2025 ಕಲಾಯ್ಸ್ ಅಲ್ಫೇನ್ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಮುಬಾರಕ್ ಮೈದಾನ ಗಂಗೊಳ್ಳಿಯಲ್ಲಿ ನಡೆಯಿತು. ಕರ್ನಾಟಕ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್ ವಿದ್ಯುಕ್ತವಾಗಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಟ್ರೋಫಿ ಅನಾವರಣಗೊಳಿಸಿದರು .
ಈ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ನಕ್ವ ಯಾಹ್ಯ ಮಲ್ಪೆ ,ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಸಾಹೇಬ್. ಟ್ರಸ್ಟಿ ಫಜ್ಲು ರಹಮಾನ್ ,ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಮೌಲಾನಾ ಜಮೀರ್ ಅಹಮದ್ ರಶಾಧಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಾಝಿಲ್ ಅಧಿ ಉಡುಪಿ, ಜಿಲ್ಲಾ ಸಮಿತಿ ಸದಸ್ಯ ಹರೂನ್ ರಶೀದ್ ಸಾಸ್ತಾನ , ಶಕೀಲ್ ಹೊನ್ನಾಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಬ್ರೆಜ್, ಗಂಗೊಳ್ಳಿ ಜಮಾತುಲ್ ಮುಸ್ಲೀಮೀನ್ ಅಧ್ಯಕ್ಷ ಮೊಹಮ್ಮದ್ ಹನೀಫ್,ಭಟ್ಕಳ ಅರ್ಬನ್ ಕೂ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಮೊಹಮ್ಮದ್ ಅಯೂಬ್ ,ಚಕ್ರವರ್ತಿ ಕ್ರಿಕೆಟರ್ಸ್ ಮನೋಜ್ ನಾಯರ್, ಟಾರ್ಪೆಟೋಸ್ ಕ್ರಿಕೆಟರ್ಸ್ ಗೌತಮ ಶೆಟ್ಟಿ ಉಪಸ್ತಿರಿದ್ದರು. ಕಲಾಯ್ಸ್ ಅಲ್ಫೇನ್ ಗಂಗೊಳ್ಳಿ ಇದರ ಮುಖ್ಯಸ್ಥ ಜಹೀರ್ ಸ್ವಾಗತಿಸಿದರು. ಬಿಲಾಲ್ ಮಣಿಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಪಂದ್ಯಾಟದ ವಿಶೇಷ ಪ್ರಥಮ ಪ್ರಶಸ್ತಿ ರೂಪಾಯಿ ಒಂದು ಲಕ್ಷ ನಗದು ರೂಪದಲ್ಲಿ ನೀಡಲಾಗುತ್ತಿದೆ.ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಬೈಕ್ ನೀಡಲಾಗುತ್ತಿದೆ. ಉದ್ಘಾಟನಾ ಪಂದ್ಯಾಟ ಗಂಗೊಳ್ಳಿ ಪೊಲೀಸ್ ತಂಡ ಹಾಗೂ ಕೋಸ್ಟಲ್ ಸೆಕ್ಯುರಿಟಿ ಗಾರ್ಡ್ ನಡುವೆ ನಡೆಯಿತು.


