ಮಣಿಪಾಲ: ಮಾಹೆ ವಿ.ವಿ. ಎಂಐಟಿಯ ಸಹಾಯಕ ಪ್ರಾಧ್ಯಾಪಿಕೆ ಗಂಗೋತ್ರಿ ಸನಿಲ್ ಅವರು ಮಂಡಿಸಿದ ಮಲ್ಟಿಮೋಡೆಲ್ ಫೇಶಿಯಲ್ ಅನಾಲಿಸಿಸ್ ಹೂ ಅಂತ್ರೋಪೊಮೆಟ್ರಿ ಆ್ಯಂಡ್ ಮೋರ್ಪೊಮೆಟ್ರಿ ಮೆಟ್ರಿ ಫಾರ್ ರೆಕಾಗ್ನಿಶನ್ ಆಫ್ ಮೊನೊಝೈಜೋಟಿಕ್ ಟ್ವಿನ್ಸ್ ಯೂಸಿಂಗ್ ಮೆಷಿನ್ ಲರ್ನಿಂಗ್ ಫಾರ್ ಫಾರೆನ್ಸಿಕ್ ಎಂಬ ಪ್ರೌಢ ಪ್ರಬಂಧಕ್ಕೆ ಮಾಹೆ ವಿ.ವಿ. ಪಿಎಚ್.ಡಿ. ನೀಡಿದೆ. ಎಂಐಟಿಯ ಸ್ಕೂಲ್ ಆಫ್ ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ| ಕೃಷ್ಣಪ್ರಕಾಶ ಕೆ. ಅವರ ಮಾರ್ಗದರ್ಶನ, ಪ್ರಾಧ್ಯಾಪಕ ಡಾ। ಶ್ರೀಕಾಂತ ಪ್ರಭು, ಕೆಎಂಸಿ ಪ್ರಾಧ್ಯಾಪಕ ಡಾ| ವಿನೋದ್ ಸಿ.ನಾಯಕ್ ಅವರ ಸಹ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಸಿದ್ಧಪಡಿಸಿದ್ದಾರೆ. ಇವರು ಮೂಲ್ಕಿಯ ರಾಜೇಶ್ ಸನಿಲ್ ಅವರ ಪತ್ನಿ.