ಗೆಳೆಯರ ಬಳಗ ಕಾಂತಾವರ (ರಿ.)11ನೇ ವರ್ಷದ ಸಂಭ್ರಮ

0
40

ನ.22 ರಂದು ನಡೆಯುವ ಸುಗ್ಗಿದ ಗೊಬ್ಬು ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಆಯೋಜನೆ ಎಲ್ಲರಿಗೂ ಮುಕ್ತ ಅವಕಾಶ

ಕಾಂತಾವರ : ಗೆಳೆಯರ ಬಳಗ ಕಾಂತಾವರ (ರಿ.) ಇದರ 11ನೇ ವರ್ಷದ ಸಂಭ್ರಮದ ಅಂಗವಾಗಿ ನವೆಂಬರ್ 22ರಂದು ಭಾನುವಾರ ಸುಗ್ಗಿದ ಗೊಬ್ಬು ಹಾಗೂ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.

ಕಾಂತಾವರದ ಅಂಬೋಡಿಮಾರು ಕೊಡಮಣಿತ್ತಾಯ ದೈವಸ್ಥಾನದ ಬಳಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಮಹಿಳೆಯರ ತ್ರೋ ಬಾಲ್, ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ, ಪುರುಷರ ಮತ್ತು ಅಂಡರ್ 19 ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು ಎಲ್ಲರಿಗೂ ಮುಕ್ತ ಅವಕಾಶವಿದೆ

ಬಹುಮಾನಗಳ ವಿವರ

ಮಹಿಳೆಯರ ತ್ರೋ ಬಾಲ್

  • ಪ್ರಥಮ: ₹3,003 ನಗದು ಹಾಗೂ ಟ್ರೋಫಿ.
  • ದ್ವಿತೀಯ: ₹2,002 ನಗದು ಹಾಗೂ ಟ್ರೋಫಿ.

ಪುರುಷರ ವಾಲಿಬಾಲ್:

  • ಪ್ರಥಮ: ₹5,005 ನಗದು ಹಾಗೂ ಟ್ರೋಫಿ.
  • ದ್ವಿತೀಯ: ₹3,003 ನಗದು ಹಾಗೂ ಟ್ರೋಫಿ.

ಪುರುಷರ ಹಗ್ಗಜಗ್ಗಾಟ

  • ಪ್ರಥಮ: ₹5,005 ನಗದು ಹಾಗೂ ಟ್ರೋಫಿ.
  • ದ್ವಿತೀಯ: ₹3,003 ನಗದು ಹಾಗೂ ಟ್ರೋಫಿ.
  • ತೃತೀಯ ಹಾಗೂ ಚತುರ್ಥ ಸ್ಥಾನಕ್ಕೆ ಟ್ರೋಫಿ.

ಮಹಿಳೆಯರ ಹಗ್ಗಜಗ್ಗಾಟ

  • ಪ್ರಥಮ: ₹5,005 ನಗದು ಹಾಗೂ ಟ್ರೋಫಿ.
  • ದ್ವಿತೀಯ: ₹3,003 ನಗದು ಹಾಗೂ ಟ್ರೋಫಿ.

ಅಂಡರ್ 19 ಹಗ್ಗಜಗ್ಗಾಟ

  • ಪ್ರಥಮ: ₹2,002 ನಗದು ಹಾಗೂ ಟ್ರೋಫಿ.
  • ದ್ವಿತೀಯ: ₹1,001 ನಗದು ಹಾಗೂ ಟ್ರೋಫಿ.

ಹಗ್ಗಜಗ್ಗಾಟ ಸ್ಪರ್ಧೆಗಳು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದ್ದು, ಭಾಗವಹಿಸುವ ತಂಡಗಳು ನವೆಂಬರ್ 21ರ ಸಂಜೆ 7 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಗೆಳೆಯರ ಬಳಗ ಕಾಂತಾವರ (ರಿ.) ಇದರ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: 9867156980 / 9844469883.