-ಮಂದಾರ ರಾಜೇಶ್
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ,ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು, ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು,ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರ ಸಹಕಾರ ಸಂಘಗಳು ಸಹಯೋಗದಲ್ಲಿ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಪೆರಾಡಿ, ಬೆಳ್ತಂಗಡಿ ತಾಲೂಕು ಇವರ ನೇತೃತ್ವದಲ್ಲಿ ಸಭಾ ಭವನ ಮತ್ತು ಗೋದಾಮು ಕಟ್ಟಡ ಉದ್ಘಾಟನೆ ಹಾಗೂ 73ನೇ ದ. ಕ. ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ – 2026 ಮತ್ತು 75ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮ ದಿನಾಂಕ: 18-11-2026 ಬುಧವಾರ ಬೆಳಿಗ್ಗೆ ಗಂಟೆ 9-30ಕ್ಕೆ ಸಂಘದ ಪ್ರಧಾನ ಕಚೇರಿ ಆವರಣ, ಪೆರಾಡಿ, ಬೆಳ್ತಂಗಡಿ ತಾಲೂಕು ಇಲ್ಲಿ ನೆರವೇರಲಿದ್ದು, ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು .

ಈ ಸಂದರ್ಭದಲ್ಲಿ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರು ನಿರ್ದೇಶಕರು ಪದಾಧಿಕಾರಿಗಳು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು.
ನೂತನ ಕಟ್ಟಡ ಉದ್ಘಾಟನೆ ಹಾಗೂ ನವೋದಯ ಸಂಘಗಳಿಗೆ ಗೌರವ ವನ್ನು ಸಹಕಾರ ರತ್ನ ಡಾ.ಎಂ ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು, ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನೆರವೇರಿಸಲಿದ್ದಾರೆ.
ಸಂಗಮ ಸಭಾಭವನ ಉದ್ಘಾಟನೆಯನ್ನು ಲಕ್ಷ್ಮಣ ಸಂಗಪ್ಪ ಸವದಿ ಸಹಕಾರ ಸಚಿವರು, ಕರ್ನಾಟಕ ಸರ್ಕಾರ ಮಾಡಲಿದ್ದಾರೆ.
ಪಂಚಸಿರಿ ಸಭಾಭವನ ಉದ್ಘಾಟನೆಯನ್ನು ಯು. ಟಿ. ಖಾದರ್ ಫರೀದ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ. ಕ. ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ನೆರವೇರಿಸಲಿದ್ದು.
ರಸಗೊಬ್ಬರ ವಿಭಾಗ ಉದ್ಘಾಟನೆಯನ್ನು ಹರೀಶ್ ಪೂಂಜ ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಮಾಡಲಿದ್ದಾರೆ.
ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಣ ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಪೆರಾಡಿ ವಹಿಸಲಿದ್ದಾರೆ.
ಪಡಿತರ ವಿಭಾಗ ಉದ್ಘಾಟನೆ ಮಂಜುನಾಥ ಭಂಡಾರಿ ಶಾಸಕರು, ವಿಧಾನ ಪರಿಷತ್, ಕರ್ನಾಟಕ ಸರ್ಕಾರ ನೆರವೇರಿಸಲಿದ್ದು ಲಿಫ್ಟ್ ಉದ್ಘಾಟನೆ ಕಾರ್ಯಕ್ರಮವನ್ನು
ಐವನ್ ಡಿ’ಸೋಜಾ ಶಾಸಕರು, ವಿಧಾನ ಪರಿಷತ್, ಕರ್ನಾಟಕ ಸರ್ಕಾರ ಮಾಡಲಿದ್ದಾರೆ.
ಸಿ.ಎಸ್.ಸಿ. ವಿಭಾಗ ಉದ್ಘಾಟನೆಯನ್ನು ಕೆ. ಹರೀಶ್ ಕುಮಾರ್ ಅಧ್ಯಕ್ಷರು, ಮಂಗಳೂರು ವಿದ್ಯುತ್ ಸರಬರಾಜು ಮಂಡಳಿ ಮಾಡಲಿದ್ದು ಉತ್ತಮ ಹೈನುಗಾರರಿಗೆ ಸನ್ಮಾನವನ್ನು ರವಿರಾಜ್ ಹೆಗ್ಡೆ ಅಧ್ಯಕ್ಷರು, ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಕುಲಶೇಖರ ಮಂಗಳೂರು ಮಾಡಲಿದ್ದಾರೆ.
ವಸತಿ ಸಮುಚ್ಚಯ ಉದ್ಘಾಟನೆಯನ್ನು ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು, ಕರ್ನಾಟಕ ಸರ್ಕಾರ ನೆರವೇರಿಸಲಿದ್ದಾರೆ.
ಸಹಕಾರ ಸಪ್ತಾಹ ಉದ್ಘಾಟನೆಯನ್ನು ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು; ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು; ನಿರ್ದೇಶಕರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಮಾಡಲಿದ್ದಾರೆ.
ರೈತ ಸಂಗಮ ಸ್ಮರಣ ಸಂಚಿಕೆ ಬಿಡುಗಡೆಯನ್ನು ತಿಮ್ಮಣ್ಣಸರಾದ ಡಾ| ಪದ್ಮಪ್ರಸಾದ ಅಜಿಲರು ಆಳದಂಗಡಿ ಅರಮನೆ ನೆರವೇರಿಸಲಿದ್ದು ಸಹಕಾರಿ ಜಾಥಾ ಉದ್ಘಾಟನೆಯನ್ನು ಎ. ಜೀವಂಧರ್ ಕುಮಾರ್ ಅನುವಂಶೀಯ ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಪಡ್ಯಾರ ಬೆಟ್ಟ ಮಾಡಲಿದ್ದಾರೆ.
ಸಹಕಾರಿ ಧ್ವಜಾರೋಹಣವನ್ನು ಕುಶಾಲಪ್ಪ ಗೌಡ ನಿರ್ದೇಶಕರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ನೆರವೇರಿಸಲಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕಛೇರಿ ಉದ್ಘಾಟನೆಯನ್ನು ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಧರ್ಮಗುರುಗಳು, ಕಾರ್ಮೆಲ್ ಮಾತೆಯ ದೇವಾಲಯ, ಶಿರ್ತಾಡಿ ನೆರವೇರಿಸಲಿದ್ದಾರೆ.
ಶ್ರೀ ಕ್ಷೇ.ಧ.ಪ್ರಾ.ಯೋ. ಉತ್ತಮ ಸಂಘಗಳಿಗೆ ಗೌರಾವರ್ಪಣೆಯನ್ನು ಅನಿಲ್ ಕುಮಾರ್ ಎಸ್. ಎಸ್. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಕ್ಷೇ.ಧ.ಪ್ರಾ.ಯೋ.ಬಿ.ಸಿ. ಟ್ರಸ್ಟ್ (ರಿ.) ಧರ್ಮಸ್ಥಳ ಮಾಡಲಿದ್ದಾರೆ.
ಸಭಾ ಕೊಠಡಿ ಉದ್ಘಾಟನೆಯನ್ನು ರಕ್ಷಿತ್ ಶಿವರಾಮ್ ಅಧ್ಯಕ್ಷರು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಬೆಳ್ತಂಗಡಿ ತಾಲೂಕು ನೆರವೇರಿಸಲಿದ್ದಾರೆ.
ಉತ್ತಮ ಕೃಷಿಕರಿಗೆ ಸನ್ಮಾನವನ್ನು ಕೆ. ಸೀತಾರಾಮ ರೈ ಅಧ್ಯಕ್ಷರು, ಮಾಸ್ ಲಿ. ಮಂಗಳೂರು ಮಾಡಲಿದ್ದಾರೆ. ವಿಶೇಷ ಸಾಧಕರಿಗೆ ಸನ್ಮಾನವನ್ನು ಪದ್ಮರಾಜ್ ಆರ್. ಪೂಜಾರಿ ಕೋಶಾಧಿಕಾರಿ, ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ, ಕುದ್ರೋಳಿ ಮಂಗಳೂರು ಮಾಡಲಿದ್ದಾರೆ.
ಕ್ಯಾಲೆಂಡರ್ ಬಿಡುಗಡೆಯನ್ನು ಎಚ್. ಎನ್. ರಮೇಶ್ ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗೋಪಾಲಕೃಷ್ಣ ಭಟ್ ಕೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು
ಎಸ್. ಎಂ. ರಘು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು ಉಪವಿಭಾಗ ಇವರುಗಳು ಇರಲಿದ್ದು ಮುಂದಿನ ದಿನಗಳಲ್ಲಿ ಹಲವು ಸಮಾಜಮುಖಿ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದರು.
ಮಧ್ಯಾಹ್ನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜಾದೂ ವಿಸ್ಮಯ ಸಂಜೆ ಆರರಿಂದ ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ನ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಪತಿ ಉಪಾಧ್ಯಾಯ, ಹೇಮಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ,ಎನ್. ಆರ್. ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ದೇವಕಿ ಡಿ. ಶೆಟ್ಟಿ, ಸುಜಾತ, ಕೃಷ್ಣಪ್ಪ, ರಾಜೇಶ್ ಎನ್. ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ್ ಕುಮಾರ್, ವಿಜಯ ನಾಯ್ಕ. ಹಾಗೂ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು.

