ದಾವಣಗೆರೆ : ದಾವಣಗೆರೆಯ ಎಂ.ಸಿ.ಸಿ.`ಎ’ ಬ್ಲಾಕ್‌ನಲ್ಲಿರುವ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಸೆಪ್ಟೆಂಬರ್ 26 ರಂದು ಶನಿವಾರ ಸಂಜೆ 6 ಗಂಟೆಗೆ ಗೌಡ ಸಾರಸ್ವತ ಸಮಾಜದ ಸರ್ವ ಸದಸ್ಯರ ಮಹಾಸಭೆಯನ್ನು ಕರೆಯಲಾಗಿದೆ ಎಂದು ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸಮಾಜದ ಅಧ್ಯಕ್ಷರಾದ ಅಮಿತಾ ಡಾ.ವೇಣುಗೋಪಾಲ್ ಪೈ ಅಧ್ಯಕ್ಷತೆಯಲ್ಲಿ ನಡೆಸುವ ಈ ಮಹತ್ವಪೂರ್ಣ ಸಭೆಯಲ್ಲಿ 2025-26ನೇ ಸಾಲಿನಲ್ಲಿ ಸಮಾಜದ ಹಿರಿಯರು ಸ್ವರ್ಗಸ್ಥರಾದ ಬಾಂಧವರಿಗೆ ಶ್ರದ್ಧಾಂಜಲಿ ಅರ್ಪಣೆ 2025-26ನೇ ಸಾಲಿನ ವರದಿ ವಾಚನ, ಲೆಕ್ಕಪತ್ರ ಮಂಡನೆ 2027-29 ರವರೆಗಿನ 3 ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಮಣಭಟ್ ಈ ಮಹಾಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಿಸಿದ್ದಾರೆ.
ಸಮಾಜದ ಬಾಂಧವರು ಸಮಾಜದ ಖಜಾಂಚಿಯಾದ ಆರ್.ವಿ.ಶೆಣೈಯವರು ವಿನಂತಿಸಿದ್ದಾರೆ. ಸನೀಹವಾಣಿಗಳಿಗೆ ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ. 9986154676, 9448666459, 8971036693

