ಮೂಡುಬಿದಿರೆ : ಇರುವೈಲು ರಸ್ತೆಯ ಸೌಹಾರ್ದ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ ಅಗಸ್ಟ್ 2ರಂದು ಸಮಾಜ ಮಂದಿರದಲ್ಲಿ ನಡೆಯಿತು. ಅಧ್ಯಕ್ಷ ಎಂ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚೆಗೆ ನಿಧನರಾದ ಸಂಘದ ಜಿಕೆ ಭಟ್ ರವರನ್ನು ಸ್ಮರಿಸಲಾಯಿತು. ಉಪಾಧ್ಯಕ್ಷ ಶ್ಯಾಮ ಹೆಗ್ಡೆ ಸ್ವಾಗತಿಸಿ, ಸದಾನಂದ ನಾರಾವಿ ಹಿಂದಿನ ವರ್ಷದ ನಡವಳಿಗಳನ್ನು ಓದಿ ದಾಖಲಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ವಾರ್ಷಿಕ್ ವರದಿ ಮಂಡಿಸಿದರು.

ಪ್ರಸ್ತುತ 6368 ಸದಸ್ಯರಿದ್ದು, 1.5 ಕೋಟಿ ಪಾಲು ಬಂಡವಾಳವನ್ನು ಹೊಂದಿದೆ. ಕಳೆದ ವರ್ಷಕ್ಕಿಂತ 15.89 ಶೇಕಡ ವೃದ್ಧಿ ದಾಖಲಿಸಿರುತ್ತದೆ. 32.81ಕೋಟಿ ಠೇವಣಿಯನ್ನು ಹೊಂದಿದ್ದು 16.43 ಶೇಕಡ ವೃದ್ಧಿಯಾಗಿದೆ. 98.83 ಶೇಕಡ ಸಾಲ ವಸೂಲಾತಿ ಆಗಿರುತ್ತದೆ. ಸಾರ್ವಜನಿಕ ಉಪಕಾರ ನಿಧಿಯಿಂದ ವಿವಿಧ ಸಂಘ-ಸಂಸ್ಥೆಗಳಿಗೆ ಸಹಾಯಧನ ನೀಡಲಾಗಿದೆ. 78.7 ಲಕ್ಷ ಲಾಭ ಗಳಿಸಿ 37.86% ವೃದ್ಧಿಯಾಗಿದ್ದು 15 ಡಿವಿಡೆಂಡ್ ನೀಡಲಾಗುತ್ತಿದೆ.
ಸೊಸೈಟಿಯ ಮೂಲಕ ಇ-ಸ್ಟ್ಯಾಂಪಿಂಗ್, ಪಹಣಿ ಪತ್ರ ಸೇವೆ, ಯಶಸ್ವಿನಿ, ವಾಹನ ವಿಮೆ, ಎಟಿಎಂ, ಇತ್ಯಾದಿಗಳೊಂದಿಗೆ ಸ್ವಸಹಾಯ ಸಂಘಗಳಿಗೆ ಬಲ ನೀಡಲಾಗುತ್ತಿದೆ.
ವಿವಿಧ ಕ್ರೀಡಾೋತ್ಸವ, ಆರೋಗ್ಯ ಶಿಬಿರ, ಮಾಹಿತಿ ಕಾರ್ಯಾಗಾರಗಳು ನಡೆಸಿ, ಅಕಾಲಿಕ ಮರಣ ಹೊಂದಿದವರ ಸಾಲ ಮನ್ನಾವನ್ನು ಮಾಡಲಾಗಿದೆ. ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸಿ ಜನರ ಬದುಕಿಗೆ ಬೆಂಬಲ ನೀಡುವ ಕ್ರಮವನ್ನು ಹೆಚ್ಚಿಸುವ, ಎಂಬಿತ್ಯಾದಿ ಮಾಹಿತಿಯನ್ನು ಸಭೆಗೆ ನೀಡಿದರು. ಎಂ ಶಾಂತರಾಮ ಕುಡ್ವ ಕಾರ್ಯಕ್ರಮ ನಿರ್ವಹಿಸಿದರು.
ವರದಿ ರಾಯಿ ರಾಜಕುಮಾರ್

