ಮೋದಿಯವರ ಜನ್ಮದಿನದ ಪ್ರಯುಕ್ತ ಗೋವುಗಳಿಗೆ ಗೋಗ್ರಾಸ ಸೇವೆ

0
11

ಬೆಳ್ತಂಗಡಿ : ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ರಾಷ್ಟ್ರ ಕಂಡ ಅತ್ಯುತ್ತಮ ನಾಯಕ ದೇಶದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸೇವಾ ಸಂಕಲ್ಪದ ಅಭಿಯಾನದ ಸಲುವಾಗಿ ಕಳೆಂಜ ಗ್ರಾಮದ ನಂದಗೋಕುಲ ಗೋಶಾಲೆಯ ಗೋವುಗಳ (ಮೇವು )ಗೋಗ್ರಾಸಕ್ಕಾಗಿ ರೂ. ಹತ್ತುಸಾವಿರದ ಐನೂರ ಆರು ರೂಪಾಯಿ (₹10,506/-) ಧನಸಹಾಯ ನೀಡಿ ಮೋದಿಯವರಿಗೆ ದೇಶವನ್ನು ಮುನ್ನಡೆಸುವ ಶಕ್ತಿ,ಆಯುರಾರೋಗ್ಯ, ಐಶ್ವರ್ಯಕ್ಕಾಗಿ ಗೋಮಾತೆಯ ಅನುಗ್ರಹ ಸಿಗಲೆಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ , ಪ್ರಧಾನ ಕಾರ್ಯದರ್ಶಿಗಳಾದ ಜಯಪ್ರಸಾದ್ ಗೌಡ ಕಡಮ್ಮಾಜೆ ಫಾರ್ಮ್ಸ್ ಮೊಗ್ರು, ವಿನೀತ್ ಕೋಟ್ಯಾನ್ ಸಾವ್ಯ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ ಹಾಗೂ ಮಂಡಲ ಪದಾಧಿಕಾರಿಗಳು ಕಾರ್ಯಕಾರಿಣಿ ಸದಸ್ಯರುಗಳು ಉಪಸ್ಥಿತರಿದ್ದರು.