ಮಿರೇ ಅಸೆಟ್ ಶೇರ್ ಖಾನ್ ನಿಂದ ತನ್ನ ಹೊಸದಾಗಿ ಪ್ರಾರಂಭಿಸಿದ ಪ್ರೀಮಿಯರ್ ವೆಲ್ತ್ ಪಾರ್ಟ್ನರ್ ವಿಭಾಗಕ್ಕೆ ಅಧಿಕೃತ ಪಾಲುದಾರರಾಗಿ ಎ.ಎಸ್.ಕೆ. ಪ್ರೈವೇಟ್ ವೆಲ್ತ್ ಸೇರ್ಪಡೆ

0
12

ರಾಷ್ಟ್ರೀಯ : ಮಿರೇ ಅಸೆಟ್ ಶೇರ್‌ಖಾನ್ ಸಂಸ್ಥೆಯು ಎ.ಎಸ್‌.ಕೆ ಪ್ರೈವೇಟ್ ವೆಲ್ತ್ ಜೊತೆಗೆ ಪ್ರಮುಖ ಕಾರ್ಯತಂತ್ರೀಯ ಸಹಭಾಗಿತ್ವವನ್ನು ಪ್ರಕಟಿಸಿದೆ. ವಿಶೇಷ ಜ್ಞಾನ ಮತ್ತು ಶ್ರೇಷ್ಠಮಟ್ಟದ ಅನುಷ್ಠಾನದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯವನ್ನು ತಲುಪಿಸಲು ಬದ್ಧವಾಗಿರುವ ಎರಡು ಪ್ರಮುಖ ಸಂಸ್ಥೆಗಳು ಒಂದಾಗುತ್ತಿರುವುದಕ್ಕೆ ಈ ಸಹಭಾಗಿತ್ವವು ನಾಂದಿ ಹಾಡಿದೆ.

ಮಿರೇ ಅಸೆಟ್ ಶೇರ್‌ಖಾನ್ ಹೊಸದಾಗಿ ಆರಂಭಿಸಿರುವ ‘ಪ್ರೀಮಿಯರ್ ವೆಲ್ತ್ ಪಾರ್ಟ್ನರ್’ ವಿಭಾಗದ ಅಡಿಯಲ್ಲಿ ಸೇರ್ಪಡೆಗೊಂಡ ಮೊದಲ ಸಂಸ್ಥೆ ಎ.ಎಸ್‌.ಕೆ ಪ್ರೈವೇಟ್ ವೆಲ್ತ್ ಆಗಿದೆ. ಈ ಉಪಕ್ರಮದ ಮೂಲಕ, ವೈವಿಧ್ಯಮಯ ಸಂಪತ್ತು ನಿರ್ವಹಣಾ ಸಲಹೆ ಮತ್ತು ಉತ್ತಮ ಗ್ರಾಹಕ ಬಾಂಧವ್ಯ ನಿರ್ವಹಣೆಯ ಮೇಲೆ ತನ್ನ ಆದ್ಯತೆಯನ್ನು ಮುಂದುವರಿಸುತ್ತಲೇ, ಭಾರತದ ಪ್ರಮುಖ ಸಂಪತ್ತು ನಿರ್ವಾಹಕರು ಹಾಗೂ ಹಣಕಾಸು ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಗುರಿಯನ್ನು ಕಂಪನಿಯು ಹೊಂದಿದೆ.

ಹಣಕಾಸು ಸೇವಾ ಕ್ಷೇತ್ರವು ಮೂಲಭೂತ ಬದಲಾವಣೆಗೆ ಒಳಪಡುತ್ತಿರುವ ಈ ಸಮಯದಲ್ಲಿ, ಗ್ರಾಹಕರು ತಮ್ಮ ಸಂಪತ್ತು ಸೃಷ್ಟಿಯ ಪ್ರಯಾಣದುದ್ದಕ್ಕೂ ವಿಶ್ವಾಸಾರ್ಹ ಸಲಹೆ, ತಡೆರಹಿತ ಅನುಷ್ಠಾನ, ಡಿಜಿಟಲ್ ಸೌಲಭ್ಯ, ಕಾರ್ಯಾಚರಣೆಯ ಶ್ರೇಷ್ಠತೆ ಹಾಗೂ ಸಮಗ್ರ ಬೆಂಬಲವನ್ನು ಒಳಗೊಂಡ ಸಮಕಾಲೀನ ಅನುಭವವನ್ನು ಹೆಚ್ಚು ಹೆಚ್ಚಾಗಿ ನಿರೀಕ್ಷಿಸುತ್ತಿದ್ದಾರೆ. ಈ ಸಹಭಾಗಿತ್ವವು ಶ್ರೀಮಂತ ಹಾಗೂ ಎಚ್‌.ಎನ್‌.ಐ ಗ್ರಾಹಕರಿಗೆ ಸಲಹೆ ನೀಡುವಲ್ಲಿ ಎ.ಎಸ್.ಕೆ. ಹೊಂದಿರುವ ಪೂರ್ವಸಿದ್ಧ ಶ್ರೇಷ್ಠತೆಯನ್ನು, ಮಿರೇ ಅಸೆಟ್ ಶೇರ್‌ಖಾನ್‌ ನ ದೃಢವಾದ ಬ್ರೋಕಿಂಗ್ ಪ್ಲಾಟ್‌ಫಾರ್ಮ್, ಸುಧಾರಿತ ತಂತ್ರಜ್ಞಾನ, ಸಂಶೋಧನೆ ಮತ್ತು ಕಾರ್ಯಾಚರಣೆಯ ಶಿಸ್ತಿನೊಂದಿಗೆ ಬೆಸೆಯುತ್ತದೆ.

ಎ.ಎಸ್‌.ಕೆ ಪ್ರೈವೇಟ್ ವೆಲ್ತ್ ಸಂಸ್ಥೆಯು ಆಳವಾದ ಸಲಹಾ ಪರಿಣತಿ, ದೀರ್ಘಕಾಲೀನ ನಂಬಿಕೆ ಮತ್ತು ವಿಶ್ವಾಸಾರ್ಹ ಬಾಂಧವ್ಯಗಳ ಮೂಲಕ ಶ್ರೀಮಂತ ಹಾಗೂ ಎಚ್‌.ಎನ್‌.ಐ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ, ಭಾರತದ ಪ್ರಮುಖ ಸಂಪತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಒಂದಾಗಿ ಸದೃಢ ಹೆಸರು ಗಳಿಸಿದೆ. ಮತ್ತೊಂದೆಡೆ, ಮಿರೇ ಅಸೆಟ್ ಶೇರ್‌ಖಾನ್ ದೃಢವಾದ ತಂತ್ರಜ್ಞಾನ, ಸಂಶೋಧನಾ ಸಾಮರ್ಥ್ಯಗಳು, ಪರಿಣಾಮಕಾರಿ ಅನುಷ್ಠಾನ ಮತ್ತು ಕಾರ್ಯಾಚರಣೆಯ ಶಿಸ್ತಿನ ಬೆಂಬಲದೊಂದಿಗೆ ದೇಶದ ಪ್ರಮುಖ ಬ್ರೋಕಿಂಗ್ ಹಾಗೂ ಹೂಡಿಕೆ ವೇದಿಕೆಗಳಲ್ಲಿ ಒಂದಾಗಿ ಬೆಳೆದಿದೆ.

ಕೇಂದ್ರ ಸಾಮರ್ಥ್ಯಗಳ ಸಮನ್ವಯ

ಈ ಸಹಭಾಗಿತ್ವವು ಪ್ರತಿಯೊಂದು ಸಂಸ್ಥೆಯೂ ತನ್ನ ಕೇಂದ್ರ ಸಾಮರ್ಥ್ಯಗಳ ಮೇಲೆ ಸಂಪೂರ್ಣವಾಗಿ ಗಮನ ಹರಿಸಲು ಅವಕಾಶ ಮಾಡಿಕೊಡುತ್ತದೆ:

ಎ.ಎಸ್‌.ಕೆ ಪ್ರೈವೇಟ್ ವೆಲ್ತ್ ಸ್ವತಂತ್ರ ಅನುಷ್ಠಾನ ಮೂಲಸೌಕರ್ಯವನ್ನು ನಿರ್ಮಿಸುವ ಅಗತ್ಯವಿಲ್ಲದೇ, ವೈವಿಧ್ಯಮಯ ಸಂಪತ್ತು ನಿರ್ವಹಣಾ ಸಲಹೆ, ಆಳವಾದ ಮಾರುಕಟ್ಟೆ ಒಳನೋಟ, ದೀರ್ಘಕಾಲೀನ ನಂಬಿಕೆ ಮತ್ತು ಗ್ರಾಹಕರೊಂದಿಗೆ ನಿಕಟ ಬಾಂಧವ್ಯ ನಿರ್ವಹಣೆಯನ್ನು ಒದಗಿಸುವುದರ ಮೇಲೆ ತನ್ನ ಗಮನವನ್ನು ಮುಂದುವರಿಸುತ್ತದೆ.

ಮಿರೇ ಅಸೆಟ್ ಶೇರ್‌ಖಾನ್, ವಿಶ್ವದರ್ಜೆಯ ಬ್ರೋಕಿಂಗ್ ಮತ್ತು ಅನುಷ್ಠಾನ ವೇದಿಕೆಯನ್ನು ಒದಗಿಸುತ್ತದೆ. ಇದು ಸದೃಢವಾದ ತಂತ್ರಜ್ಞಾನ, ಸಂಶೋಧನೆ, ಅಪಾಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯೊಂದಿಗೆ ಎ.ಎಸ್‌.ಕೆ ಸಂಸ್ಥೆಯ ಗ್ರಾಹಕರನ್ನು ಸಬಲೀಕರಣಗೊಳಿಸುತ್ತದೆ.
ಕಾರ್ಯತಂತ್ರೀಯ ಪ್ರಾಮುಖ್ಯತೆ ಮತ್ತು ಬೆಳವಣಿಗೆಯ ಪ್ರೇರಕಶಕ್ತಿ
ವ್ಯಾಪಾರ ದೃಷ್ಟಿಕೋನದಿಂದ, ಈ ಸಹಭಾಗಿತ್ವವು ಮೂರು ಸ್ತಂಭಗಳ ಕಾರ್ಯತಂತ್ರೀಯ ದೃಷ್ಟಿಕೋನವನ್ನು ಬಲಪಡಿಸುತ್ತದೆ:

ಪ್ಲಾಟ್‌ಫಾರ್ಮ್ ಆಧರಿತ ಬೆಳವಣಿಗೆ: ಭಾರತದ ಪ್ರಮುಖ ಸಂಪತ್ತು ನಿರ್ವಾಹಕರು ಮತ್ತು ಹಣಕಾಸು ಸಂಸ್ಥೆಗಳಿಗೆ ಮಿರೇ ಅಸೆಟ್ ಶೇರ್‌ಖಾನ್ ಅನ್ನು ಆದ್ಯತೆಯ ಅನುಷ್ಠಾನ ಹಾಗೂ ಬ್ರೋಕಿಂಗ್ ವೇದಿಕೆಯಾಗಿ ರೂಪಿಸುವುದು.

ಕಾರ್ಯಾಚರಣೆಯ ಸಮನ್ವಯ: ಎರಡೂ ಸಂಸ್ಥೆಗಳು ತಮ್ಮ ಮುಖ್ಯ ಸಾಮರ್ಥ್ಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವುದು; ಇದು ಹೆಚ್ಚು ಶಕ್ತಿಯುತ, ಅನುಕೂಲಕರ ಮತ್ತು ಸುಲಲಿತ ಗ್ರಾಹಕ ಅನುಭವಕ್ಕೆ ಹಾದಿ ಮಾಡಿಕೊಡುತ್ತದೆ.

ವಿಸ್ತರಿಸಬಹುದಾದ ಬೆಳವಣಿಗೆಯ ಶಕ್ತಿ: ಗ್ರಾಹಕರ ಸಕ್ರಿಯತೆ ಹೆಚ್ಚಿಸಲು, ಮಾರುಕಟ್ಟೆಯ ಪಾಲನ್ನು ವಿಸ್ತರಿಸಲು, ಉತ್ಪಾದಕತೆಯನ್ನು ಉತ್ತಮಗೊಳಿಸಲು ಮತ್ತು ಸುಸ್ಥಿರ ದೀರ್ಘಕಾಲೀನ ಬೆಳವಣಿಗೆಯನ್ನು ಮುನ್ನಡೆಸಲು ವಿನ್ಯಾಸಗೊಳಿಸಲಾದ ಮರುಬಳಕೆ ಮಾಡಬಹುದಾದ ಚೌಕಟ್ಟನ್ನು ಸೃಷ್ಟಿಸುವುದು.
ಮಿರೇ ಅಸೆಟ್ ಶೇರ್‌ಖಾನ್‌ ಸಿಇಒ ಮೂನ್ ಕ್ಯುಂಗ್ ಕಾಂಗ್: “ಎ.ಎಸ್‌.ಕೆ ಪ್ರೈವೇಟ್ ವೆಲ್ತ್ ಸಂಸ್ಥೆಯನ್ನು ಅಧಿಕೃತ ವಾಣಿಜ್ಯ ಪಾಲುದಾರನಾಗಿ ಮತ್ತು ನಮ್ಮ ಹೊಸದಾಗಿ ಆರಂಭಿಸಲಾದ ‘ಪ್ರೀಮಿಯರ್ ವೆಲ್ತ್ ಪಾರ್ಟ್ನರ್’ ವಿಭಾಗದ ಭಾಗವಾಗಿ ಸ್ವಾಗತಿಸಲು ನಾವು ಸಂತಸಪಡುತ್ತೇವೆ. ಈ ಸಹಭಾಗಿತ್ವವು ಎ.ಎಸ್‌.ಕೆ ಪ್ರೈವೇಟ್ ವೆಲ್ತ್‌ನ ಸಲಹಾ ಪರಿಣತಿ ಮತ್ತು ಮಿರೇ ಅಸೆಟ್ ಶೇರ್‌ಖಾನ್‌ನ ಅನುಷ್ಠಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಸಾಮರ್ಥ್ಯಗಳನ್ನು ಒಗ್ಗೂಡಿಸಿ ಗ್ರಾಹಕರಿಗೆ ಶ್ರೇಷ್ಠ ಹೂಡಿಕೆ ಅನುಭವವನ್ನು ನೀಡುತ್ತದೆ. ಅಲ್ಲದೆ, ಪ್ರಮುಖ ಸಂಪತ್ತು ನಿರ್ವಹಣಾ ಸಂಸ್ಥೆಗಳಿಗೆ ಆದ್ಯತೆಯ ಅನುಷ್ಠಾನ ಮತ್ತು ಬ್ರೋಕಿಂಗ್ ವೇದಿಕೆಯಾಗುವ ನಮ್ಮ ದೃಷ್ಟಿಕೋನವನ್ನು ಇದು ಬಲಪಡಿಸುತ್ತದೆ” ಎಂದು ಹೇಳಿದರು.

ಎ.ಎಸ್‌.ಕೆ ಪ್ರೈವೇಟ್ ವೆಲ್ತ್‌ ಸಹ-ಸಂಸ್ಥಾಪಕ, ಸಿಇಒ ಮತ್ತು ಎಂ.ಡಿ. ರಾಜೇಶ್ ಸಲುಜಾ: “ಈ ಸಹಭಾಗಿತ್ವವು ಮಿರೇ ಅಸೆಟ್ ಶೇರ್‌ಖಾನ್‌ ನ ಪ್ಲಾಟ್‌ಫಾರ್ಮ್ ಸಾಮರ್ಥ್ಯಗಳಿಗೆ ದೊರೆತ ಬಲವಾದ ಮಾನ್ಯತೆಯಾಗಿದೆ. ವಿಶ್ವಾಸಾರ್ಹತೆ ಮತ್ತು ಸಾಂಸ್ಥಿಕ ಭದ್ರತೆಗೆ ಯಾವುದೇ ಭಂಗ ಬಾರದಂತೆ, ನೇರ ಈಕ್ವಿಟಿ ಹಾಗೂ ಇಟಿಎಫ್ ಮಾರುಕಟ್ಟೆಯ ಭಾಗವಹಿಸುವಿಕೆಯಲ್ಲಿ ನಮ್ಮ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಈ ಪ್ಲಾಟ್‌ಫಾರ್ಮ್ ನಮ್ಮ ಪ್ರಸ್ತುತ ಡಿಜಿಟಲ್ ವ್ಯವಸ್ಥೆಯೊಂದಿಗೆ ಸುಲಲಿತವಾಗಿ ಸಂಯೋಜನೆಗೊಂಡಿದೆ. ಅತ್ಯುತ್ತಮ ಗ್ರಾಹಕ ಅನುಭವ, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಸುಸ್ಥಿರ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸುವ ದೀರ್ಘಕಾಲೀನ ಸಹಭಾಗಿತ್ವವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಈ ಸಹಭಾಗಿತ್ವದ ಕುರಿತು ಮಿರೇ ಅಸೆಟ್ ಶೇರ್‌ಖಾನ್‌ ನಿರ್ದೇಶಕ ಮತ್ತು ಬಿಸಿನೆಸ್ ಪಾರ್ಟ್ನರ್ ಗ್ರೂಪ್‌ ನ ಮುಖ್ಯಸ್ಥ ಹನುಮಂತ ರಾವ್: “ನಮ್ಮ ಪಾಲುದಾರರ ಜಾಲಕ್ಕೆ ಎ.ಎಸ್‌.ಕೆ ಪ್ರೈವೇಟ್ ವೆಲ್ತ್‌ ಸೇರ್ಪಡೆಯು ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಸಂಪತ್ತು ಮತ್ತು ಬ್ರೋಕಿಂಗ್ ವ್ಯವಸ್ಥೆಯಲ್ಲಿನ ಅತ್ಯುತ್ತಮ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ನಮ್ಮ ವಿಧಾನ ಹಾಗೂ ನಮ್ಮ ಪ್ಲಾಟ್‌ಫಾರ್ಮ್‌ ನ ಸಾಮರ್ಥ್ಯಕ್ಕೆ ಈ ಬಾಂಧವ್ಯವು ಸೂಕ್ತ ಸಾಕ್ಷಿಯಾಗಿದೆ. ಈ ಸಹಭಾಗಿತ್ವವನ್ನು ನಿರ್ಮಿಸಲು ಕೈಗೊಂಡ ಶ್ರಮದ ಬಗ್ಗೆ ನಮಗೆ ಹೆಮ್ಮೆಯಿದೆ, ಮತ್ತು ಇದು ಎರಡೂ ಸಂಸ್ಥೆಗಳಿಗೆ ಹಾಗೂ ಅತ್ಯಂತ ಮುಖ್ಯವಾಗಿ ಗ್ರಾಹಕರಿಗೆ ತೆರೆದಿಡುವ ಹೊಸ ಅವಕಾಶಗಳ ಕುರಿತು ನಮಗೆ ಅಪಾರ ಉತ್ಸಾಹವಿದೆ” ಎಂದು ಹೇಳಿದರು.

ಮಿರೇ ಅಸೆಟ್ ಶೇರ್‌ಖಾನ್ ಮತ್ತು ಎ.ಎಸ್‌.ಕೆ ಪ್ರೈವೇಟ್ ವೆಲ್ತ್ ಎರಡೂ ಸಂಸ್ಥೆಗಳು ನಿಕಟ ಸಹಯೋಗ, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ನಿರಂತರ ಸುಧಾರಣೆಯ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡಲು ಬದ್ಧವಾಗಿವೆ. ಈ ಸಹಭಾಗಿತ್ವವು ಗ್ರಾಹಕರಿಗೆ ದೀರ್ಘಕಾಲೀನ ಮೌಲ್ಯವನ್ನು ಸೃಷ್ಟಿಸುವ ಹಾಗೂ ಉದ್ಯಮದಲ್ಲಿ ಸಾಂಸ್ಥಿಕ ಸಹಯೋಗಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.