ಅಂತರರಾಷ್ಟ್ರೀಯ ಕರಾಟೆ ಪಂದ್ಯಕೂಟದಲ್ಲಿ ಅರ್ಜುನ್ ಎಸ್. ದೇವಾಡಿಗಗೆ ಚಿನ್ನ, ಬೆಳ್ಳಿ

0
11

ಬ್ರಹ್ಮಾವರ ಬುಡೋಕನ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಯ ಸಾಧನೆ

ಬ್ರಹ್ಮಾವರ: ಶಿವಮೊಗ್ಗದಲ್ಲಿ ನಡೆದ 7ನೇ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಕೂಟದಲ್ಲಿ ಬ್ರಹ್ಮಾವರ ಬುಡೋಕನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್‌ನ ವಿದ್ಯಾರ್ಥಿ ಅರ್ಜುನ್ ಎಸ್. ದೇವಾಡಿಗ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಪಂದ್ಯಕೂಟದಲ್ಲಿ ಭಾಗವಹಿಸಿದ ಅರ್ಜುನ್ ಅವರು ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕ ಪಡೆದುಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಅರ್ಜುನ್ ಅವರು ಸಂತೋಷ್ ದೇವಾಡಿಗ ಹಾಗೂ ಸುಮಂಗಲ ದೇವಾಡಿಗ ದಂಪತಿಯ ಪುತ್ರರಾಗಿದ್ದಾರೆ. ಪ್ರಸ್ತುತ ಕರ್ನಾಟಕದ ಪ್ರಸಿದ್ಧ ಬುಡೋಕನ್ ಕರಾಟೆ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ವಾಮನ್ ಪಾಲನ್ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ನಿರಂತರ ಅಭ್ಯಾಸ, ಶಿಸ್ತು ಹಾಗೂ ತರಬೇತಿಯ ಫಲವಾಗಿ ಅರ್ಜುನ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.