‘ಜನ ಸೇವೆಯೇ ಈಶ ಸೇವೆ’ ಎಂಬುದನ್ನು ಪ್ರತಿಪಾದಿಸಿದ ‘ಸೇವಾ ಸಂಕಲ್ಪ ಅಭಿಯಾನ’ : ಕುತ್ಯಾರು ನವೀನ್ ಶೆಟ್ಟಿ

0
9

ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಬ್ರಹ್ಮಾವರದ ‘ಅಪ್ಪ ಅಮ್ಮ ಅನಾಥಾಲಯ’ದಲ್ಲಿ ‘ಅನ್ನದಾನ’ ಮತ್ತು ‘ಸಹ ಭೋಜನ’ ಕಾರ್ಯಕ್ರಮ

‘ಜನ ಸೇವೆಯೇ ಈಶ ಸೇವೆ’ ಎಂದು ನಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಹಾಗೂ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಅನಾಥಾಲಯದಲ್ಲಿ ಹಮ್ಮಿಕೊಂಡಿರುವ ಅನ್ನದಾನ ಮತ್ತು ಸಹ ಭೋಜನ ಒಂದು ಮನ ಮುಟ್ಟುವ ಮಾದರಿ ಕಾರ್ಯಕ್ರಮ. ಇಂತಹ ಜನೋಪಯೋಗಿ ಭಾವನಾತ್ಮಕ ಕಾರ್ಯಕ್ರಮಗಳು ಇನ್ನಷ್ಟು ಕಡೆ ಮೂಡಿಬರುವಂತಾಗಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಹಾಗೂ ಜನಸೇವೆಗೆ 25 ವರ್ಷಗಳು ತುಂಬಿದ ಪ್ರಯುಕ್ತ ‘ಸೇವಾ ಸಂಕಲ್ಪ ಅಭಿಯಾನ’ದಡಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಡಿ.ಬಿ. ಕುಂದಾಪುರ ಅವರ ನೇತೃತ್ವದಲ್ಲಿ ಬ್ರಹ್ಮಾವರದ ‘ಅಪ್ಪ- ಅಮ್ಮ ಅನಾಥಾಲಯ’ದಲ್ಲಿ ನಡೆದ ಒಂದು ದಿನದ ‘ಅನ್ನದಾನ’ ಮತ್ತು ‘ಸಹ ಭೋಜನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಅನಾಥಾಲಯದಲ್ಲಿದ್ದ ಹಿರಿಯ ನಾಗರಿಕರೊಂದಿಗೆ ಮಾತನಾಡಿ, ಅವರ ಆಶೀರ್ವಾದವನ್ನು ಪಡೆದು, ಅವರೊಂದಿಗೆ ಸಹಭೋಜನ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಕೈಪುಂಜಾಲು, ಎಸ್.ಸಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಹಿರಿಯಣ್ಣ ಅಮ್ಮುoಜೆ, ಅನಿತಾ ಸಾಲ್ಯಾನ್, ಎಸ್.ಸಿ. ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಗೋಪಾಲ ಕಳಂಜೆ, ಎಸ್.ಸಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಚಾoತಾರು, ಸುರೇಶ ಮೂಡುಬಗೆ, ಸುಂದರ ಬಿ.ಕಾರ್ಕಳ, ಬಿಜೆಪಿ ಉಡುಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ದೇವಾನಂದ ನಾಯಕ್, ಮಹಿಳಾ ಮೋರ್ಚಾ ಉಡುಪಿ ಗ್ರಾಮಾಂತರ ಅಧ್ಯಕ್ಷೆ ರಮ್ಯಾ ರಾವ್, ಎಸ್.ಸಿ. ಮೋರ್ಚಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಗಿರಿಧರ್ ಬ್ರಹ್ಮಾವರ, ಕಾರ್ಯಕಾರಿಣಿ ಸದಸ್ಯೆ ರೇವತಿ ಮಟಪಾಡಿ, ಎಸ್.ಸಿ. ಮೋರ್ಚಾ ಬೈಂದೂರು ಅಧ್ಯಕ್ಷ ಅಶೋಕ್ ಎನ್.ಡಿ., ಉಪಾಧ್ಯಕ್ಷ ಪ್ರವೀಣ್ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಅಕ್ಷಯ್, ಎಸ್.ಸಿ. ಮೋರ್ಚಾ ಕುಂದಾಪುರ ಅಧ್ಯಕ್ಷ ಮಂಜುನಾಥ್ ಬಳ್ಕೂರು, ಎಸ್.ಸಿ. ಮೋರ್ಚಾ ಉಡುಪಿ ಗ್ರಾಮಾಂತರ ಉಪಾಧ್ಯಕ್ಷ ಪುಷ್ಪರಾಜ್ ಉಳ್ಳಾಲ, ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯರುಗಳಾದ ಯಶೋಧ ಹಿರಿಯಡ್ಕ, ನಾಗರತ್ನ ಕುಂದಾಪುರ ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.