BE, MBA, CA, LLB ಅಭ್ಯರ್ಥಿಗಳಿಗೆ ಸಿಹಿಸುದ್ದಿ ; IREL Indiaಯಲ್ಲಿ ಉದ್ಯೋಗಾವಕಾಶ

0
12

ನವದೆಹಲಿ : ಕೇಂದ್ರ ಪರಮಾಣು ಶಕ್ತಿ ಇಲಾಖೆ (Department of Atomic Energy – DAE) ಅಧೀನದ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (IREL India Limited) 2026ನೇ ಸಾಲಿನ ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 73 ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳು

  • ಜನರಲ್ ಮ್ಯಾನೇಜರ್ – 5 ಹುದ್ದೆಗಳು
  • ಡೆಪ್ಯೂಟಿ ಜನರಲ್ ಮ್ಯಾನೇಜರ್ – 3 ಹುದ್ದೆಗಳು
  • ಚೀಫ್ ಮ್ಯಾನೇಜರ್ – 5 ಹುದ್ದೆಗಳು
  • ಸೀನಿಯರ್ ಮ್ಯಾನೇಜರ್ – 8 ಹುದ್ದೆಗಳು
  • ಮ್ಯಾನೇಜರ್ – 3 ಹುದ್ದೆಗಳು
  • ಡೆಪ್ಯೂಟಿ ಮ್ಯಾನೇಜರ್ – 19 ಹುದ್ದೆಗಳು
  • ಅಸಿಸ್ಟೆಂಟ್ ಮ್ಯಾನೇಜರ್ – 30 ಹುದ್ದೆಗಳು

ಹುದ್ದೆಗೆ ಅನುಗುಣವಾಗಿ ಗರಿಷ್ಠ ವಯೋಮಿತಿ 28 ರಿಂದ 50 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾನುಸಾರ SC/ST, OBC, PwBD ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ BE/B.Tech, M.Sc, CA/CMA, MBA, LLB, MBBS, CS, MA, MSW ಅಥವಾ ಪದವಿ ಪೂರ್ಣಗೊಳಿಸಿರಬೇಕು. ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವವೂ ಕಡ್ಡಾಯವಾಗಿದೆ.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ತಿಂಗಳಿಗೆ ₹40,000 ರಿಂದ ₹2,40,000 ವರೆಗೆ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ

  • ಸಾಮಾನ್ಯ / OBC / EWS ಅಭ್ಯರ್ಥಿಗಳು – ₹944
  • SC / ST / PwBD / ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳು – ₹354

ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಆರಂಭ: 20 ಜುಲೈ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2026 (ಸಂಜೆ 6.00 ಗಂಟೆಯವರೆಗೆ)

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ IREL India ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ.