ಗವರ್ನಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್ ಮಹಾಸಭೆ ಪ್ರತಿಭಾ ಪುರಸ್ಕಾರ

0
7

ಸೌತ್ ಕೆನರಾ ಗವರ್ನಮೆಂಟ್ ಆಫೀಸಸ್ ಕೋ ಆಪರೇಟಿವ್ ಬ್ಯಾಂಕ್ ನ ವಾರ್ಷಿಕ ಮಹಾಸಭೆ ಪ್ರತಿಭಾ ಪುರಸ್ಕಾರ ಮತ್ತು ಠೇವಣಿದಾರರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕೆನರಾ ಹೈಸ್ಕೂಲ್ ಆವರಣದಲ್ಲಿನ ಸುಧೀಂದ್ರ ಸಭಾಭವನದಲ್ಲಿ ಜರುಗಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್. ಎಸ್. ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಸಾಧನೆ ತೋರಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಬ್ಯಾಂಕಿನ ಮಾಜಿ ನಿರ್ದೇಶಕರಾದ ಪ್ರಸನ್ನ ಕುಮಾರ್ ಪಕ್ಕಳ ಇವರನ್ನು ಸನ್ಮಾನಿಸಲಾಯಿತು.

ನಂತರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಅಂಬರೀಶ. ಯು.ಕೆ ವಾರ್ಷಿಕ ವರದಿ ಮಂಡಿಸಿದರು, ಪ್ರಭಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮೀಶ.ಯನ್ ಕಾರ್ಯ ಸೂಚಿಗಳನ್ನು ಮಂಡಿಸಿದರು, 2025 -26 ನೇ ಸಾಲಿನ ಲಾಭಾಂಶದ ಮೇಲೆ ಡಿವಿಡೆಂಡ್ ಘೋಷಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷರಾದ ಮಾಲತೇಶ ಹೆಗ್ಗಪ್ಪ ಲಾಠಿ, ನಿರ್ದೇಶಕರಾದ ಅಕ್ಷಯ ಭಂಡಾರ್ಕರ್, ಜ್ಯೋತಿಪ್ರಕಾಶ್, ಯು.ಪಾಂಡುರಂಗ ,ಪದ್ಮನಾಭ ಜೋಗಿ,ಪ್ರಕಾಶ್ ನಾಯಕ್, ಪ್ರವೀಣ್ ಎಸ್ , ವಿಶಾಲಾಕ್ಷಿ ಎನ್ ಟಿ, ಶಶಿಕಲಾ , ಸಬಿತಾ ಸೆರಾವೊ ಮತ್ತು ಬ್ಯಾಂಕಿನ ಸದಸ್ಯರು ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ್