ಮಹಾವೀರ ಕಾಲೇಜು ಬಳಿ ಬೃಹತ್ ಹೊಂಡ ಮುಚ್ಚಿದ ಆಟೋ ಚಾಲಕರು

0
8

ಮೂಡುಬಿದಿರೆ : ಮಹಾವೀರ ಕಾಲೇಜು ಸಮೀಪ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ದೊಡ್ಡ ದೊಡ್ಡ ಹೊಂಡಗಳಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದು, ನಿನ್ನೆ ದ್ವಿಚಕ್ರ ವಾಹನ ಸವಾರರೊಬ್ಬರು ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾದ ಘಟನೆ ನಡೆದಿತ್ತು.

ರಸ್ತೆಯಲ್ಲಿದ್ದ ಬೃಹತ್ ಹೊಂಡಗಳಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದ್ದು, ರಾತ್ರಿ ವೇಳೆ ಅಪಘಾತದ ಸಾಧ್ಯತೆ ಮತ್ತಷ್ಟು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಮನಗಂಡ ಮಹಾವೀರ ಕಾಲೇಜು ಆಟೋ ಸ್ಟ್ಯಾಂಡ್‌ನ ಚಾಲಕರು ಹಾಗೂ ಸದಸ್ಯರು ಸ್ವಯಂಪ್ರೇರಿತರಾಗಿ ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.