
ಆರಂಬೋಡಿ : ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಹೊಕ್ಕಾಡಿಗೋಳಿ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ನೀರಪಲ್ಕೆ ಕ್ರೀಡಾoಗಣದಲ್ಲಿ ಜರಗಿತು. ಕ್ರೀಡಾಕೂಟವನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾದ ಪ್ರಭಾಕರ್. ಎಚ್. ಹುಲಿಮೇರು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಎಸ್. ಕೆ. ಫ್ರೆಂಡ್ಸ್ ಅಧ್ಯಕ್ಷರಾದ ನವೀನ್ ಕೂಡುರಸ್ತೆ ವಹಿಸಿದರು.

ಮುಖ್ಯ ಅತಿಥಿಯಾಗಿ ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷರು ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷರು ಸಂದೀಪ್ ಶೆಟ್ಟಿ, ಆರಂಬೋಡಿ ಬಿರುವೆರೆ ಕೂಟ ಅಧ್ಯಕ್ಷರು ಸುರೇಂದ್ರ ಪೂಜಾರಿ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ,ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯೆ ಲೀಲಾ, ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ನಿರ್ದೇಶಕರು ವೀರಪ್ಪ ಪರವ, ತಿಮ್ಮಪ್ಪ ಪೂಜಾರಿ ಕೂಡುರಸ್ತೆ, ಸುದರ್ಶನ್ ಮಂಜಿಲ, ಕಿರಣ್ ಸುವರ್ಣ ನೆತ್ತೋಡಿ ಮರೂರು,ಸದಾಶಿವ ಪೂಜಾರಿ ಹುಲಿಮೇರು, ಸಂತೋಷ್ ಮಂಜಿಲ, ಹರೀಶ್ ಮಾಸ್ತಿಕಟ್ಟೆ, ಗೋಪಾಲ ಕುಲಾಲ್, ಗುರು ನೀರಪಲ್ಕೆ,ಇನ್ನಿತರರು ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್. ಕೆ. ಫ್ರೆಂಡ್ಸ್ ನ ಸದಸ್ಯರಾದ ಅಭಿಷೇಕ್ ನೀರಪಲ್ಕೆ, ಪ್ರಸಾದ್, ಪ್ರದೀಪ್, ಪ್ರಕಾಶ್, ಸುಜೀತ್, ರಾಕೇಶ್, ವಿಕಾಸ್, ಪ್ರಜ್ವಲ್,ಆದರ್ಶ್, ಸುಶಾಂತ್,ಸುರೇಶ್ಎಚ್ ಹೊಕ್ಕಾ ಡಿಗೋಳಿ, ಯಶವಂತ್ ಇನ್ನಿತರರು ಉಪಸ್ಥಿತರಿದ್ದರು. ಒಟ್ಟು 63ತಂಡಗಳು ಭಾಗವಹಿಸಿದವು.
