ಬಿಸಿ ರೋಡಿನಲ್ಲಿ ವೈಭವದ ‘ವಿಶ್ವಭಾರತಿ ಯಕ್ಷ ಸಂಭ್ರಮ’: ಜುಲೈ 20 ರಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ

0
11

ಬಂಟ್ವಾಳ : ಮುಡಿಪುವಿನ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಮತ್ತು ಬಂಟ್ವಾಳ ತಾಲೂಕಿನ ತುಳು ಶಿವಳ್ಳಿ ಸೇವಾ ಟ್ರಸ್ಟ್ ಇವುಗಳ ಜಂಟಿ ಸಹಯೋಗದಲ್ಲಿ ‘ವಿಶ್ವಭಾರತಿ ಯಕ್ಷ ಸಂಭ್ರಮ’ ಎಂಬ ವಿನೂತನ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಲಾಗಿದೆ.

ಈ ಸಾಂಸ್ಕೃತಿಕ ಕಾರ್ಯಕ್ರಮವು ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ನಡೆಯಲಿದೆ.

​ಜುಲೈ 20 ರಿಂದ 26 ರವರೆಗೆ ಕಾರ್ಯಕ್ರಮ:-

ಈ ಯಕ್ಷಗಾನ ತಾಳಮದ್ದಳೆ ಸಪ್ತಾಹವು ಜುಲೈ 20ನೇ ಸೋಮವಾರದಿಂದ ಪ್ರಾರಂಭಗೊಂಡು ಜುಲೈ 26ನೇ ಆದಿತ್ಯವಾರದವರೆಗೆ ಸತತ ಏಳು ದಿನಗಳ ಕಾಲ ಜರುಗಲಿದೆ.

ಪ್ರತಿದಿನ ಸಂಜೆ 4:00 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 4:30 ರಿಂದ ಪ್ರಸಿದ್ಧ ಕಲಾ ಸಂಘ ಹಾಗೂ ಕಲಾವಿದರಿಂದ ತಾಳಮದ್ದಳೆ ಪ್ರಸಂಗಗಳು ಮೂಡಿಬರಲಿವೆ.

​ವೈವಿಧ್ಯಮಯ ಪ್ರಸಂಗಗಳು:-

ಸಪ್ತಾಹದ ದಿನಗಳಲ್ಲಿ ಮಹಾಶೂರ ಭೌಮಾಸುರ, ಭೀಷ್ಮ ಪ್ರತಿಜ್ಞೆ, ಶಾಂಭವಿ ವಿಜಯ, ದಕ್ಷಯಜ್ಞ, ಮೋಕ್ಷ ಸಂಗ್ರಾಮ, ಅತಿಕಾಯ ಮೋಕ್ಷ ಹಾಗೂ ಕೊನೆಯ ದಿನವಾದ ಭಾನುವಾರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಹಿಮ್ಮೇಳ-ಮುಮ್ಮೇಳದೊಂದಿಗೆ ‘ಅಂಗದ ಸಂಧಾನ’ ತಾಳಮದ್ದಳೆ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.

​ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು, ಯಕ್ಷಗಾನ ಸಂಘಟಕರು ಹಾಗೂ ವಿದ್ವಾಂಸರು ಭಾಗವಹಿಸಲಿದ್ದಾರೆ.

ಕೊನೆಯ ದಿನದಂದು ಗೌರವ ಪುರಸ್ಕಾರ ಕಾರ್ಯಕ್ರಮವೂ ಇರಲಿದ್ದು, ಕಲಾಭಿಮಾನಿಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ ಎಂದು ಸಂಚಾಲಕರಾದ ಪ್ರಶಾಂತ್ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ-ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here