ಶೀರೂರು ಪರ್ಯಾಯಕ್ಕೆ ಹಸಿರು ಹೊರೆ ಕಾಣಿಕೆ ಮೆರವಣಿಗೆ

0
46

ದಿನಾಂಕ 16-01-2026 ಶುಕ್ರವಾರ , ಮದ್ಯಾಹ್ನ 3.00 ಗಂಟೆಗೆ ಸರಿಯಾಗಿ ಅಖಿಲ ಭಾರತ ದೈವರಾಧಕರ ಒಕ್ಕೂಟ ( ರಿ ) ಕೇಂದ್ರೀಯ ಉಡುಪಿ ಜಿಲ್ಲೆ ಹಾಗೂ ಬೊಬ್ಬರ್ಯ ಸೇವಾ ಸಮಿತಿ ತೆಂಕುಪೇಟೆ ಉಡುಪಿ ಇವರ ಸಾರಥ್ಯದಲ್ಲಿ ವಿವಿಧ ಸಂಘ ಸಂಸ್ಥೆ, ದೇವಸ್ಥಾನ ಹಾಗೂ ದೈವಸ್ಥಾನಗಳ ಸಹಯೋಗದೊಂದಿಗೆ ಈ ಬಾರಿಯ ಶೀರೂರು ಪರ್ಯಾಯದ ಹಸಿರು ಹೊರೆ ಕಾಣಿಕೆಯು ಉಡುಪಿಯ ಬೊಬ್ಬರ್ಯ ದೈವಸ್ಥಾನದಲ್ಲಿ ಜರಗಿತ್ತು.

ಪರ್ಯಾಯ ಹೊರ ಕಾಣಿಕೆ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ , ಹಾಗೂ ಸಮಿತಿಯ ಸದಸ್ಯರು ಅಖಿಲ ಭಾರತ ದೈವರಾಧಾಕರ ಒಕ್ಕೂಟ ( ರಿ ) ಸಂಸ್ಥಾಪಕ ಅಧ್ಯಕ್ಷರು ಹಾಗೂ ಬೊಬ್ಬರ್ಯ ಸೇವಾ ಸಮಿತಿಯ ಸಂಸ್ಥಾಪಕರಾದ ವಿನೋದ್ ಶೆಟ್ಟಿ, ಕಂಗಣ ಬೆಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಪ್ರಧಾನ ಅರ್ಚಕರಾದ ಜಗದೀಶ್ ಶೆಟ್ಟಿ ಕಂಬಳ ಮನೆ, ಒಕ್ಕೂಟದ ಗೌರವಾಧ್ಯಕ್ಷರು ವರ್ತೆ ಕಲ್ಕುಡ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ಸುಧಾಕರ್ ಶೆಟ್ಟಿ ತಂಗಾಣ, ಪ್ರಮುಖ ಮುಖಂಡರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ತದನಂತರ ಬೊಬ್ಬರ್ಯ ಹಾಗೂ ಪರಿವಾರ ದೈವಗಳಿಗೆ ಪ್ರಾರ್ಥನೆ ಮಾಡಲಾಯಿತು. ಹಸಿರು ಹೊರ ಕಾಣಿಕೆಯನ್ನು ಭವ್ಯ ಮೆರವಣಿಗೆಯಲ್ಲಿ ವಿಶೇಷವಾದ ಭಜನೆ, ಚಂಡೆ ವಾದನ, ಕೊಂಬು ಡೋಲು ವಾದನ, ಬ್ಯಾಂಡ್ ವಾದನದ ತಂಡಗಳು ಉಪಸ್ಥಿತಿಯಲ್ಲಿ ರಥ ಬೀದಿ ಯಿಂದ ಅನ್ನಬ್ರಹ್ಮ ಕ್ಕೆ ಒಪ್ಪಿಸಲಾಯಿತು.

ಈ ಸಂದರ್ಭದಲ್ಲಿ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜಿ, ದೊಡ್ಡನಗುಡ್ಡೆ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಉಪಾಧ್ಯಕ್ಷರಾದ ನವೀನ್ ಪಾತ್ರಿ, ವಾಸು ಶೇರಿಗಾರ, ಒಕ್ಕೂಟದ ತಾಲೂಕು ಅಧ್ಯಕ್ಷರಾದ ರಂಜಿತ್ ಶೇರಿಗಾರ, ಜೊತೆ ಕಾರ್ಯದರ್ಶಿ ಶಾಮ್, ಸಂಘಟನೆ ಕಾರ್ಯದರ್ಶಿ ವಿಜಯ ಮಡಿವಾಳ, ಜೊತೆ ಸಂಘಟನಾ ಕಾರ್ಯದರ್ಶಿ ಕೃಷ್ಣ ಪೂಜಾರಿ ಅಂಜಾರು, ಬಾಲಚಂದ್ರ ಪೂಜಾರಿ, ರವಿ, ರಮೇಶ್ ಜೋಗಿ, ಬೊಬ್ಬರ್ಯ ಸೇವಾ ಸಮಿತಿ ಸದಸ್ಯರಾದ ವರದರಾಜ ಕಾಮತ್, ಅವಿನಾಶ್ ಸೇರಿಗಾರ್, ಒಕ್ಕೂಟದ ಮಹಿಳಾ ಸಂಚಾಲಕರಾದ ಪ್ರೀತಿ ಕಲ್ಯಾಣಪುರ, ಕುಸುಮ ನಾಗರಾಜ್, ರಮಣಿ, ಸುನಂದ, ಯಶೋದ ಪೂಜಾರಿ, ಹಾಗೂ ಪ್ರಮುಖ ಸಂಘ ಸಂಸ್ಥೆಯ ಮುಖಂಡರುಗಳು ಸದಸ್ಯರು ಉಪಸ್ಥಿತಿ ಇದ್ದರು.

-ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here