ಮಲ್ಪೆ ; ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ , ಶ್ರೀ ಹನುಮ ದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ರಜತ ಮೊಹೋತ್ಸವ ಆಚರಣೆ , ಹಾಗೂ ಹನುಮ ಜಯಂತಿ ವೈಭವದಿಂದ ಶನಿ ವಾರ ನೆಡೆಯಿತು , ಶ್ರೀದೇವರಿಗೆ ಸೇವೆ ನೀಡಿದ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ರೊಪದಲ್ಲಿ ಬೆಳ್ಳಿಯ ನಾಣ್ಯ ಸಹಿತ ಮಹಾ ನೈವೇದ್ಯ ಲಡ್ಡು ಪ್ರಸಾದ ವಿತರಿಸಲಾಯಿತು. ಶ್ರೀ ಹನುಮ ಜಯಂತಿ ಅಂಗವಾಗಿ ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ , ಶ್ರೀ ಹನುಮ ದೇವರಿಗೆ 108 ಪವಮಾನ ಕಲಶಾಭಿಷೇಕ , 108 ಸೀಯಾಳ ಅಭಿಷೇಕ , 1008 ಲಡ್ಡು ಮಹಾ ನೈವೇದ್ಯ , ವಿಶೇಷ ಹೂಗಳಿಂದ ಶ್ರೀದೇವರಿಗೆ ವಿಶೇಷ ಅಲಂಕಾರ , ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪಲ್ಲ ಪೂಜೆ , ಮಹಾ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ , ಶ್ರೀದೇವರಿಗೆ ವಿಶೇಷ ಅಲಂಕಾರ , ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ , ಭಜನಾ ಕಾರ್ಯಕ್ರಮ , ದೀಪಾರಾಧನೆ ,ಮಹಾ ರಂಗಪೂಜೆ , ಮಹಾಪೂಜೆ ಬಳಿಕ ಚಂಡೆವಾದನ ದೊಂದಿಗೆ ರಜತ ಪಲ್ಲಕ್ಕಿ ಉತ್ಸವ , ವಸಂತ ಪೂಜೆ , ಅಷ್ಟಾವಧಾನ ಸೇವೆ ಪ್ರಸಾದ ವಿತರಣೆ ನಡೆಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಮಂದಿರದ ಅರ್ಚಕರಾದ ಅರ್ಚಕರಾದ ಶೈಲೇಶ್ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು , ರಾಜೇಶ್ ಭಟ್ , ಮಂಜುನಾಥ ಭಟ್, ಸಹಕರಿಸಿದರು. ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ, ಎಮ್ ದೇವರಾಯ ಭಟ್ , ವಿ ಅನಂತ್ ಕಾಮತ್ , ಸುರೇಂದ್ರ ಭಂಡಾರ್ ಕಾರ್ , ಸುದೀರ್ ಶೆಣೈ , ಅನಿಲ್ ಕಾಮತ್ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥರಿದ್ದರು.