Thursday, April 24, 2025
HomeUncategorizedನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ, ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ

ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ, ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ

ನಾಗೂರಿನ ಶ್ರೀ ವೀರ ಹನುಮಾನ್ ದೇವಸ್ಥಾನ, ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಕಾರ್ಯಕ್ರಮ ಸಂಭ್ರಮದಲ್ಲಿ ನಡೆಯಿತು.

ಸಾನಿಧ್ಯದಲ್ಲಿ ದಿನಾಂಕ : 06-04-2025ನೇ ಅದಿತ್ಯವಾರ “ಶ್ರೀ ರಾಮನವಮಿಯಂದು
ಪ್ರಾರಂಭಗೊಂಡು ದಿನಾಂಕ : 15-04-2025 ನೇ ಮಂಗಳವಾರ ಬೆಳಿಗ್ಗೆ ಗಂಟೆ 6.00ರ ವರೆಗೆ ಅರ್ಚಕರ ನೇತೃತ್ವದಲ್ಲಿ ನಡೆಯಿತು.

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಜಿಯವರ ಪರಮಾನುಗ್ರಹ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯಾ ಆಶೀರ್ವಾದದೊಂದಿಗೆ ಶ್ರೀ ವೀರ ಹನುಮಾನ್ ದೇವರಿಗೆ ಹಾಗೂ ಪರಿವಾರ ದೇವರುಗಳಿಗೆ ಜೀರ್ಣ ಅಷ್ಟಬಂಧ ಬ್ರಹ್ಮಕಲಶ ಮತ್ತು 1008 ಕಲಶಾಭಿಷೇಕ ಮಹೋತ್ಸವ ನಡೆಯಿತು.

ಹನುಮ ಜಯಂತಿ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನೆಡೆಯಿತು.

ವಿಶೇಷವಾಗಿ ಈ ವರ್ಷ ದಾನಿಗಳ ಸಹಾಯದಿಂದ ಈ ವರ್ಷ ದೇವಾಲಯ ಸುತ್ತಲೂ ಕಂಗೊಳಿಸುತ್ತಿರುವ ಪೇಂಟಿಂಗ್ ವ್ಯವಸ್ಥೆ ವ್ಯವಸ್ಥೆ ಮಾಡಲಾಗಿದೆ. ಧನ ಸಹಾಯ ಮಾಡಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು

ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಭಜನಾ ತಂಡಗಳಿಂದ ಕುಳಿತು ಭಜನೆ ಕುಣಿತ ಭಜನೆ ಕಾರ್ಯಕ್ರಮ ಸಂಭ್ರಮದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಶ್ರೀ ಎಸ್‌. ಗಿರಿ ಶೆಟ್ಟಿ ಧರ್ಮದರ್ಶಿಗಳು, ಶ್ರೀ ಕ್ಷೇತ್ರ ನಾಗೂರು, ಶ್ರೀ ನಾಣು ಡಿ. ಚಂದನ್ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ರತ್ನಾಕರ್ ಪೂಜಾರಿ ಉಪಾಧ್ಯಕ್ಷರು, ಗಣಪತಿ ಭಟ್
ಪ್ರಧಾನ ಅರ್ಚಕರು, ರವೀಂದ್ರ ದೇವಾಡಿಗ ಸದಸ್ಯರು, ಕೃಷ್ಣ ಎಮ್. ಕುಂದರ್ ಗೌರವಾಧ್ಯಕ್ಷರು
ಶ್ರೀ ಸಂತೋಷ್ ಆಚಾರ್ಯ ಕಾರ್ಯದರ್ಶಿ ಶ್ರೀ ಗಣೇಶ್ ಪೂಜಾರಿ ಜೊತೆ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಕಾರಂತ್ ಸಹಾಯಕ ಅರ್ಚಕರು ಹೆಚ್. ರಾಜಕುಮಾರ್ ಶೆಟ್ಟಿ ಲೆಕ್ಕಪರಿಶೋಧಕರು, ಹೆಚ್. ರಾಮಚಂದ್ರ ಗೌರವಾಧ್ಯಕ್ಷರು, ಹರೀಶ್ ಕುಮಾರ್ ಕೋಶಾಧಿಕಾರಿ, ನಿತ್ಯಾನಂದ ನ್ಯಾರಿ ಜೊತೆ ಕೋಶಾಧಿಕಾರಿ, ನಾರಾಯಣ್ ಎಮ್. ಸದಸ್ಯರು ಶನೇಶ್ವರ ಸ್ವಾಮಿ ಆರ್ಚಕರು, ಊರಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular