
ಕುಳಾಯಿ : ನವಗಿರಿ ಸೇವಾ ಟ್ರಸ್ಟ್ (ರಿ ) ಹೊಸಬೆಟ್ಟು ಕುಳಾಯಿ ಇದರ ಪ್ರಧಾನ ಯುವ ಸಂಘಟನೆ ಯುವಚೇತನ ಹೊಸಬೆಟ್ಟು ಕುಳಾಯಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿವಿದ್ಯಾದಾಯಿನಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿಯಾಗಿ ಸಂಚಾಲಕಿಯಾಗಿ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿಯಾಗಿ ಗುರುತರ ಸೇವೆ ಸಲ್ಲಿಸಿದ ಐ ಉಮಾದೇವಿ ಹಾಗೂ ವಿದ್ಯಾದಾಯಿನಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ ರಮೇಶ್ ಇವರಿಗೆ ಅವರ ಸ್ವಗೃಹದಲ್ಲಿ ಗುರುನಮನ ಸಲ್ಲಿಸಲಾಯಿತು.

ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ಅಭಿನಂದನ ಭಾಷಣಗೈದಿದ್ದು ತಂದೆ ತಾಯಿಯರು ಜೀವನವನ್ನು ನೀಡಿದರೆ ಶಿಕ್ಷಕರು ಜೀವನಕ್ಕೆ ಸರಿಯಾದ ದಾರಿ ತೋರಿಸುತ್ತಾರೆ. ಅಂತಹ ಶಿಸ್ತು ಸಮಾನತೆಯೊಂದಿಗೆ ಜ್ಞಾನದಾನ ಮಾಡಿದ ಶಿಕ್ಷಕರು ಸದಾ ಅಭಿನಂದನೀಯರು ಎಂದರು.
ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹಿರಿಯ ನ್ಯಾಯವಾದಿ ರಾಘವೇಂದ್ರ ಹೆಚ್ ವಿ, ಯುವಚೇತನದ ಅಧ್ಯಕ್ಷರಾದ ಅರುಣ್ ಕಕ್ಕೆಸಾಲು, ಕಾರ್ಯದರ್ಶಿ ವಿಕ್ರಮ್ ಮೈರ್ಪಾಡಿ, ಕೋಶಾಧಿಕಾರಿ ಅಮಿತ್ ಹತ್ವಾರ್, ಉಪಾಧ್ಯಕ್ಷರಾದ ಪ್ರಶಾಂತ್ ರಾವ್ ಹೆಚ್, ಅಶೋಕ್, ವಸಂತ ರಾಜ ಹೆಚ್, ಉಜ್ವಲ್ ಉಪಸ್ಥಿತರಿದ್ದರು ಪವನ್ ಮೈರ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
