
ದಾವಣಗೆರೆ : ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಶಾಖಾ ಮಠದಲ್ಲಿ ಅಕ್ಟೋಬರ್ 11 ಭಾನುವಾರದಿಂದ 20 ಮಂಗಳವಾರದವರೆಗೆ ಶ್ರೀ ಶಾರದಾ ಶರನ್ನವರಾತ್ಯುತ್ಸವ ಆಧ್ಯಾತ್ಮಿಕ ಪರಂಪೆಯ ಶ್ರೀಮದ್ ಜಗದ್ಗುರು ಶ್ರೀಶ್ರೀಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳ ಅನುಗ್ರಹದಿಂದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಅಕ್ಟೋಬರ್ 10 ದಿನಗಳ ಕಾಲ 11 ರಿಂದ 20 ರವರೆಗೆ ಗಣಪತಿ ನವಗ್ರಹ ಹೋಮ, ಸೌರ ಹೋಮ, ಪುರುಷಸೂಕ್ತ ಹೋಮ, ರುದ್ರಾಸ್ವಾಹಾಕಾರ ಹೋಮ, ಶ್ರೀ ಚಕ್ರ ಹೋಮ, ಮೇಧಾದಕ್ಷಿಣಾ ಮೂರ್ತಿ ಹೋಮ, ಚಂಡಿಕಾ ಹೋಮ, ನೀಲಸರಸ್ವತಿ ಹೋಮ, ವಿಷ್ಣು ಸಹಸ್ರನಾಮ ಹೋಮ, ಚಂಡಿಪಾರಾಯಣ, ಹೂವಿನ ಅಲಂಕಾರ ಸೇವೆ, ಅನ್ನಸಂತರ್ಪಣೆ, ಸರ್ವ ಸೇವೆಗೆ ಯಾವುದೇ ಜಾತಿ, ಮತ, ಬೇಧವಿಲ್ಲದೇ ಸಾರ್ವಜನಿಕರು ಭಾಗವಹಿಸಬಹುದೆಂದು ಅರ್ಚಕರಾದ ಅಜಯ್ ಭಟ್ಟ್ ಪ್ರಕಟಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ದೇವರ ಪೂಜೆಗೆ ಹೆಸರು ನೊಂದಾಯಿಸಲು ಉಪಾಸಕರಾದ ಬಾಲಚಂದ್ರ ಭಟ್ ಈ ಕೆಳಗಿನ ಸನೀಹವಾಣಿಗಳಿಗೆ ಸಂರ್ಕಿಸಬೇಕಾಗಿ ವಿನಂತಿಸಿದ್ದಾರೆ 7110277073, 9902866244, 9886704560
