ನಿಜವಾದ ಗುರುಭಕ್ತರನ್ನು ನೋಡಬೇಕಿದ್ದರೆ ಮಹಾರಾಷ್ಟ್ರದಲ್ಲಿ ಮಾತ್ರ ಸಾಧ್ಯ : ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ
ಮುಂಬಯಿ : ಬಂಟರ ಸಂಘ ಮುಂಬಯಿ ಹಾಗೂ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಮಹಾರಾಷ್ಟ್ರ ಘಟಕ ಇವರ ಜಂಟಿ ಸಂಯೋಜನೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜುಲೈ 29ರಂದು 27ನೇ ವರ್ಷದ ಗುರುಪೂರ್ಣಿಮಾ ಆಚರಣೆಯು ಭಜನೆ ಸತ್ಸಂಗದ ದೊಂದಿಗೆ ನಡೆಯಿತು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕ ಮಹಾರಾಷ್ಟ್ರ ಇದರು ವಾರ್ಷಿಕೋತ್ಸವವನ್ನು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀಯವರ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರಾದ ದಾಮೋದರ್ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಶ್ವೇತಾ ಚಂದ್ರಹಾಸ್ ರೈ, ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ,ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಚಿತ್ರ ಆರ್ ಶೆಟ್ಟಿ, ಒಡಿಯೂರು ಪರಮ ಭಕ್ತ ವಾಮಯ್ಯ ಶೆಟ್ಟಿ, ಉದ್ಯಮಿ ವಾಮನ್ ಶೆಟ್ಟಿ,,ಧಾಣೆ ಬಳಗದ ಗುಣಪಾಲ್ ಶೆಟ್ಟಿ, ಬಳಗದ ಪುಣೆಯ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿಯವರು ಉಪಸ್ತರಿದ್ದರು,
ಸ್ವಾಮೀಜಿಯವರನ್ನು ಒಡಿಯೂರು ಬಳಗದ ವತಿಯಿಂದ ಮತ್ತು ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು,ಸಾಧ್ವಿ ಶ್ರೀ ಮಾತಾನಂದಮಯೀಯವರನ್ನ ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಹಾಗೂ ಬಂಟರ ಸಂಘದ ಮಹಿಳಾ ವಿಭಾಗ ದವರು ಗೌರವಿಸಿದರು.
ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಚನ ನೀಡುತ್ತಾ ಗುರು ಎಂದರೆ ವ್ಯಕ್ತಿಯಲ್ಲ ಅದೊಂದು ಶಕ್ತಿ ,ಇಂದು ಆರಾಧನೆಯನ್ನು ಮಾಡುತ್ತಿದ್ದೇವ ನಿತ್ಯಾನಂದ ಗುರುಗಳೆಂದರೆ ನಮ್ಮ ಹೃದಯದಲ್ಲಿ ಆನಂದವನು ನೀಡುವರು ಎಂದು ನಾವು ನಂಬಿಕೊಂಡು ಬಂದವರು. ಅವರ ವಿಶೇಷತೆ ಆನಂದ ಪರಂಪರೆಗೆ ದೊಡ್ಡ ಕೊಡುಗೆಯನ್ನು ನೀಡಿದವರು ಅದು ನಿತ್ಯಾನಂದ ಗುರುಗಳು.
ಗುರು ಎಂಬ ಎರಡಕ್ಷರದಲ್ಲಿರುವ ಮಹತ್ವ ವೆಂದರೆ ಗು ಎಂದರೆ ಕತ್ತಲೆ. ರು ಎಂದರೆ ಬೆಳಕು, ಕತ್ತಲೆ ಅಜ್ಞಾನದವನ್ನು ದೂರ ಮಾಡಿ ಸುಜ್ಞಾನದ ಬೆಳಕು ಅವನೇ ಗುರು,ಭಾರತ ದೇಶದಲ್ಲಿ ಗುರು ಪರಂಪರೆಗೆ ಮಹತ್ವವಿದೆ, ತಾಯಿ ತಂದೆಯೇ ಮೊದಲ ಗುರು ತಾಯಿಗೆ ಮಹತ್ವ ನೀಡಿ ಬೇಕು, ಅಂತ ತಾಯಿಯನ್ನು ಕಣ್ಣೀರು ಬಾರದಾಗಿ ದುಃಖ ಆಗದಂತೆ ಕಾಪಾಡೋದು ಮಕ್ಕಳ ಕರ್ತವ್ಯ, ತಂದೆಯ ಕಣ್ಣೀರನ್ನು ಬಾರದಾಗಿ ನೋಡಬೇಕು ನಮ್ಮ ಬದುಕು ಬೆಳಕಾಗಬೇಕಾದರೆ ಇದು ಅಗತ್ಯ, ಒಂದು ಅಕ್ಷರ ಕಳಿಸಿದವನು ಕೂಡ ಗುರು,, ಜಗತ್ತನ್ನೇ ಗುರುವಾಗಿ ಸ್ವೀಕರಿಸಿದಾಗ ಮಾತ್ರ ನಾವು ಬದುಕಿನಲ್ಲಿ ಬೆಳಕು ಕಾಣಲು ಸಾಧ್ಯ, ಮುಂಬೈಯ ಬಂಟರ ಸಂಘ ಮತ್ತು ಒಡಿಯೂರು ಬಳಗದ ಒಗ್ಗಟ್ಟಿನಿಂದ ಸೇವೆ ಮಾಡುತ್ತಿದೆ, ನಮ್ಮಲ್ಲಿ ಸಂಪತ್ತು ಬಂದಾಗ ವಿನಯ ಪೂರ್ವಕ ಆಗಬೇಕು, ಅಹಂಕಾರ ಭಾರದಾಗೆ ನೋಡಿಕೊಳ್ಳಬೇಕು, ಶಿಕ್ಷಣ ವೃತ್ತಿಯಾಗುತ್ತಿದೆ ಅದು ಸೇವೆ ಆಗಬೇಕು, ನಾನು 43 ವರ್ಷಗಳಿಂದ ಧರ್ಮ ಕಾರ್ಯದ ಬಗ್ಗೆ ಸಂಚಾರ ಮಾಡುತ್ತಿದ್ದೇನೆ ಎಲ್ಲಿ ನೋಡಿದರೂ ಅಲ್ಲಿ ಬಂಟರ ಹೆಸರು ಕೇಳಿ ಬರುತ್ತಿದೆ, ಕಷ್ಟಕ್ಕೆ ಹೋಗಿ ಬಂಟರಲ್ಲಿ ತಿಳಿಸಿದಾಗ ಅವ ಸ್ಪಂದಿಸುವ ಮನೋಭಾವ ಅವನಲ್ಲಿರುತ್ತದೆ ,ಇದು ಬಂಟರ ಗುಣ ಬಂಟನೆಂದರೆ ರಕ್ಷಕ.
ಭಾರಿ ರಕ್ಷಕ ಅಲ್ಲ. ಧರ್ಮ ಸಂರಕ್ಷಕ. ಯಾಕೆಂದರೆ ನಮ್ಮ ಜಿಲ್ಲೆಯ ಎಲ್ಲಾ ದೇವಸ್ಥಾನಗಳು ದೇವಸ್ಥಾನಗಳು ಶಿಕ್ಷಣ ಸಂಸ್ಥೆಗಳು, ಅಭಿವೃದ್ಧಿಯ ಕಾರ್ಯಗಳಿಗೆ ಬಹುಪಾಲನ್ನು ನೀಡಿದವರು ಬಂಟರು. ಇಂಥ ಬಂಟರು ಒಗ್ಗಟ್ಟಿನ ಈ ಸಂಘಟನೆ ಸಮಾಜಕ್ಕೆ ಇನ್ನಷ್ಟು ಆದರ್ಶವಾಗುವ ರೀತಿಯಲ್ಲಿ ಸೇವೆ ಮಾಡಲಿ, 27 ವರ್ಷಗಳ ಹಿಂದೆ ಒಡಿಯೂರು ಬಳಗದ ನಡೆಸಿದಕಾರ್ಯಗಳನ್ನು ನೆನಪಿಸಿದಾಗ ಬಹಳಷ್ಟು ಸಂತೋಷವಾಗುತ್ತಿದೆ. ಕಳೆದೊಂದು ಹತ್ತು ದಿನಗಳಿಂದ ಈ ನಗರದಲ್ಲಿ ಭಕ್ತರ ಅಪಾರ ಮನೆಗಳಿಗೆ ಭೇಟಿ ನೀಡಿದ್ದೇವೆ ಮನೆಗಳನ್ನೇ ದೇವಸ್ಥಾನ ಮಾಡಿದ್ದಾರೆ ,ಆ ಮನೆಯಲ್ಲಿ ನಡೆಯುತ್ತಿರುವ ಕಾರ್ಯಗಳು ಕಂಡಾಗ ಆನಂದವಾಗುತ್ತದೆ, ನಿಜವಾದ ಗುರುಭಕ್ತರನ್ನು ನೋಡಬೇಕಿದ್ದರೆ ಅದು ಮಹಾರಾಷ್ಟ್ರದಲ್ಲಿ ಮಾತ್ರ ಸಾಧ್ಯ, ಯಾರಲ್ಲೂ ಕೂಡ ಸ್ವಾರ್ಥ ಇಲ್ಲದೆ ಗುರುಸೇವೆಯನ್ನು ಮಾತ್ರ ಮಾಡುತ್ತಿದ್ದಾರೆ.
ಇಲ್ಲಿಯ ಗುರುಭಕ್ತರು ಮಾಡಿರುವ ಗುರು ಸೇವೆ ನಿಜವಾಗಿ ಭಗವಂತನಿಗೆ ಸಮರ್ಪಣೆಯಾಗಿದೆ, ಒಡಿಯುವವರಿಗೆ ಪ್ರಾರಂಭ ದಿನದಲ್ಲಿ ಬಂದವರು ಇಂದಿನ ದಿನದಲ್ಲೂ ಕೂಡ ನಮ್ಮೊಟ್ಟಿಗೆ ಸೇರಿಕೊಂಡಿದ್ದಾರೆ. ಭಕ್ತಿ ಶ್ರದ್ಧೆಯ ಮೇಲೆ ನಂಬಿಕೆ ಇರಬೇಕು. ಅದು ಗುರು ಆಗಿರಲಿ, ದೇವರಾಗಿರಲಿ., ಭಗವಂತನಲ್ಲಿ ಸಾಗುವ ಪ್ರಯಾಣದಲ್ಲಿ ದಾರಿಯ ಬೆಳಕು ಗುರು ಆಗಿರುತ್ತಾನೆ . ನಮ್ಮಿಂದ ನಾವೇ ಪರಿವರ್ತನೆ ಆಗಬೇಕು ನಮ್ಮೊಳಗಿನ ಭಗವಂತನನ್ನು ನೋಡುವ ಆಗಬೇಕು,, ದಾನ ಧರ್ಮಗಳು ಮಾಡಿದಾಗ ಪುಣ್ಯ ಸಂಚಯನವಾಗುತ್ತದೆ,, ಒಡಿಯೂರು ಯಾವ ಬಳಗದರು ತಮ್ಮ ಆದಾಯದ ಪಾಲನ್ನು ಧಾರ್ಮಿಕ ಕಾರ್ಯಕ್ಕೆ ವಿನಿಯೋಗಿಸಲು ನೀಡುತ್ತಿದ್ದಾರೆ, ಇದು ಅವರಿಗೆ ಬಾಲ್ಯದಲ್ಲಿ ಸೇವಾ ಬಳಗದ ಮಾತಾಪಿತರು ದಾರಿ ತೋರಿಸಿದ್ದಾರೆ ,ಮಾರ್ಗದರ್ಶನ ನೀಡಿದ್ದರಿಂದ ಇಂದು ಬಳಗಕ್ಕೆ ಯುವ ಸಮುದಾಯ ಬಹಳಷ್ಟು ದೇಣಿಗೆಯನ್ನು ಸಮರ್ಪಿಸುತ್ತಿದೆ, , ನಾವುತುಳು ನಾಡಿನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದವರು, ಅದನ್ನು ಉಳಿಸುವ ಬೆಳೆಸುವ ಕಾಯಕದಲ್ಲಿ ನಮ್ಮ ಬದುಕನ್ನು ಕಟ್ಟೋಣ, ಮಕ್ಕಳಿಗೆಲ್ಲರಿಗೂ ಯಾವುದೇ ಭಾಷೆಯನ್ನು ಕಳಿಸಿ ಆದರೆ ನಮ್ಮ ಭಾಷೆಯನ್ನು ಮಾತ್ರ ಮರೆಯಬಾರದು ಭಾಷೆಯಲ್ಲಿ ಸಂಸ್ಕೃತಿ ಇದೆ, ಭಾರತೀಯ ಪರಂಪರೆ ಎಂದರೆ ಅದು ಸಂಸ್ಕೃತಿಯ ಬೆಳಕು ಅದನ್ನು ಉಳಿಸುವ ನಮ್ಮೆಲ್ಲರ ಕರ್ತವ್ಯ, ಭಾರತದ ಮೌಲ್ಯವೇ ಆಧ್ಯಾತ್ಮಿಕತೆ ಅದನ್ನು ಉಳಿಸುವ, ನಮಗೆ ರಾಷ್ಟ್ರ ಮುಖ್ಯ ರಾಷ್ಟ್ರ ಉಳಿದರೆ ಧರ್ಮ ಉಳಿಯುತ್ತದೆ , ಸನಾತನ ಹಿಂದೂ ಧರ್ಮಕ್ಕೆ ಅಂತ್ಯವಿಲ್ಲ ಅಂತ ಧರ್ಮವನ್ನು ಉಳಿಸುವ ಕಾರ್ಯವನ್ನು ಮಾಡುವ ಎಂದು ನುಡಿದರು
ಸಾಧ್ವಿ ಶ್ರೀ ಮಾತಾನಂದಮಯೀಯವರು ಗುರುವಿನ ಭಜನೆಯ ಮೂಲಕ ಗುರುವನ್ನು ಸ್ಮರಿಸಿಕೊಂಡರು, ಯುವ ಬಳಗದ ವತಿಯಿಂದ ಶ್ರೀಗಳನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಮಹಾಪ್ರಸಾದ ಅನ್ನದಾನವನ್ನು ನೀಡಿದ ವಾಮನ್ ಶೆಟ್ಟಿ ದಂಪತಿಯನ್ನು ಶ್ರೀಗಳು ಗೌರವಿಸಿದರು, ಹಾಗೂ ಬಂಟರ ಸಂಘದ ಪದಾಧಿಕಾರಿಗಳನ್ನು ಬಳಗದ ಹಿರಿಯ ಸದಸ್ಯರಾದ ವಾಮಯ್ಯ ಶೆಟ್ಟಿಯವರನ್ನು,, ಬಳಗದ ಅಧ್ಯಕ್ಷರಾದ ದಾಮೋದರ್ ಶೆಟ್ಟಿ ದಂಪತಿಯನ್ನು, ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಶ್ವೇತಾ ಚಂದ್ರಹಾಸ್ ರೈ ದಂಪತಿಯನ್ನು, ಉದ್ಯಮಿ ರವೀಂದ್ರನಾಥ್ ಭಂಡಾರಿ , ಪುಣೆಯ ಒಡಿಯೂರು ಬಳಗದ ಸರ್ವ ಸದಸ್ಯರ ಶ್ರೀಗಳು ವಿಶೇಷವಾಗಿ ಗೌರವಿಸಿದರು, ಕಾರ್ಯಕ್ರಮವನ್ನು ಬಳಗದ ಗೌರವ ಪ್ರಧಾನ ಕಾರ್ಯದರ್ಶಿ, ಪ್ರಕಾಶ್ ಶೆಟ್ಟಿ ಪೇಟೆಮನೆ ನಿರೂಪಿಸಿ ವದಿಸಿದರು, ಆರಂಭದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ.ನಡೆಯಿತು, ಮಹಾಮಂಗಳಾರತಿ ಪೂಜ್ಯ ಶ್ರೀಗಳವರ ದಿವ್ಯ ಹಸ್ತದಿಂದ ನಡೆಯಿತು . ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡಿದ್ದರು,
ಒಡಿಯೂರು ಶ್ರೀಗಳು ಲೋಕ ಮೆಚ್ಚವ ಗುರುವಾಗಲು ತತ್ವಜ್ಞಾನಿ, ಆಧ್ಯಾತ್ಮಿಕದ ಅವರಲ್ಲಿದೆ: ಪ್ರವೀಣ್ ಭೋಜ ಶೆಟ್ಟಿ
ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ ಕಳೆದ 27 ವರ್ಷಗಳಿಂದ ಬಳಗ ಮತ್ತು ಸಂಘ ಜಂಟಿಯಾಗಿ ಗುರುಪೂರ್ಣಿಮೆಯನ್ನು ಜಂಟಿಯಾಗಿ ಮಾಡುತ್ತಾ ಬಂದಿದೆ. ಗುರು ಎಲ್ಲರಿಗೂ ಆಗುವುದಕ್ಕೆ ಸಾಧ್ಯವಿಲ್ಲ, ಒಬ್ಬರಿಗೆ ಒಂದೊಂದು ಗುರುಗಳಾಗುತ್ತಾರೆ ಆದರೆ ಎಲ್ಲರೂ ಗುರು ಲೋಕದ ಗುರು ಆಗಬೇಕಿದ್ದರೆ ಇಂಥ ತತ್ವಜ್ಞಾನಿ ಆಧ್ಯಾತ್ಮಿಕದೆ ಇದ್ದರೆ ಮಾತ್ರ ಲೊಕ ಮೆಚ್ಚುವ ಗುರುವಾಗಲು ಸಾಧ್ಯ ಒಡಿಯೂರು ಶ್ರೀಗಳಿಂದ ಸಾಧ್ಯವಾಗಿದೆ, ಬಂಟರ ಸಂಘಕ್ಕೆ ನೂರು ವರ್ಷಗಳು ಯ ಗೊಳ್ಳುತ್ತಿದೆ.
ನಿಮ್ಮ ಆಶೀರ್ವಾದ ಅಗತ್ಯ ಇದೆ, 100 ವರ್ಷಕ್ಕೆ ಬರುವ ಅಧ್ಯಕ್ಷರಿಗೆ ಮತ್ತು ನನ್ನ ಕೂಡ ಒಂದುಯೋಜನೆ ಇದೆ ಈ ಭವನಕ್ಕೆ ಹೊಸ ರೂಪ ಕೊಡಬೇಕೆನ್ನುವುದು , ಕಟ್ಟಡಕ್ಕೆ ಬಹಳಷ್ಟು ವರ್ಷಗಳಾಗಿವೆ ನೂತನ ಭವನವನ್ನು ನಿರ್ಮಾಣದ ಕನಸಿದೆ ಅದರ ಒಟ್ಟಿಗೆಬಂಟರು ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವ ಕನಸಿದೆ ಎಲ್ಲವೂ ಸಹಕಾರಗೊಳ್ಳಲು ನಿಮ್ಮ ಆಶೀರ್ವಾದ ಅಗತ್ಯವಿದೆ , ಬಳಗ ಬಹಳಷ್ಟು ಧಾರ್ಮಿಕ ಕಾರ್ಯವನ್ನು ಮಾಡುತ್ತಿದೆ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡಲಿ ಎಂದು ನುಡಿದರು.

