ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 77

0
22

ಮನೆಮನೆಗೆ ನಾರಾಯಣಗುರು ಸಂದೇಶ ತಲುಪಿಸುತ್ತಿರುವ ಯುವವಾಹಿನಿ ಕಾರ್ಯ ಶ್ಲಾಘನೀಯ : ಗಿರೀಶ್ ಪೆರ್ವ

ದಡ್ಡಲಕಾಡು : ನಾರಾಯಣಗುರುಗಳ ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಸಮಾಜದಲ್ಲಿ ಗುರುತತ್ವದ ಅರಿವು ಮೂಡಿಸುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾಗಿದೆ. ದಾಸ ಪರಂಪರೆಯ ಭಜನಾ ಸಂಕೀರ್ತನೆಯ ಮೂಲಕ ಗುರುತತ್ವವಾಹಿನಿ ಕಾರ್ಯಕ್ರಮವು ಅದ್ಭುತ ಯಶಸ್ಸು ಕಂಡಿದೆ ಎಂದು ಸಜಿಪಮೂಡ ಈಶ್ವರಮಂಗಲ ಸದಾಶಿವ ದೇವಸ್ಥಾನದ ಅಧ್ಯಕ್ಷ ಗಿರೀಶ್ ಪೆರ್ವ ಹೇಳಿದರು.

ಅವರು ಸೆಪ್ಟೆಂಬರ್ 9ರಂದು ದಡ್ಡಲಕಾಡು ದೇವೀನಗರದ ಚೈತ್ರಾ ವಿಠ್ಠಲ ಪೂಜಾರಿ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ–77ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಯೋಗೀಶ್ ಕಲ್ಲಡ್ಕ, ನವೀನ್ ಕಾರಜೆ, ನವೀನ್ ಕುಡ್ಮೇರು, ಚಿಂತನ್ ರಾಜ್, ಸದಸ್ಯರಾದ ಪ್ರಶಾಂತ್ ಏರಮಲೆ, ಯಶೋಧರ ಕಡಂಬಳಿಕೆ, ಯತೀಶ್ ಬೊಳ್ಳಾಯಿ, ಸುದೀಪ್ ರಾಯಿ, ಮಧುಸೂದನ್ ಮಧ್ವ, ಲೋಹಿತ್ ಕನಪಾದೆ, ಹರಿಣಾಕ್ಷಿ ನಾವೂರ, ಸತೀಶ್ ಬಾಯಿಲ, ಸದಾನಂದ ವಾಮದಪದವು, ಲಿತೀಶ್ ವಾಮದಪದವು ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ನಾಗೇಶ್ ಪೊನ್ನೊಡಿ, ಶಿವಾನಂದ ಎಂ., ಅರುಣ್ ಮಹಾಕಾಳಿಬೆಟ್ಟು, ಹರೀಶ್ ಕೋಟ್ಯಾನ್ ಕುದನೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ ಹಾಗೂ ವಿಜೀತ್ ಕೋಟೆಕಣಿ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ವಿಠ್ಠಲ ಪೂಜಾರಿ ಅವರು ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು. ಘಟಕದ ಅಧ್ಯಕ್ಷ ಕಿರಣ್ ಪೂಂಜರಕೊಡಿ ಕಾರ್ಯಕ್ರಮ ನಿರೂಪಿಸಿದರು.