23-04-2026ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್, ನಲ್ಲಿ ಆಚಾರ್ಯ ವಾಣಿಜ್ಯ ಪಿ ಯು ಹಾಗೂ ಪ್ರಥಮ ದರ್ಜೆ ಕಾಲೇಜು, ಹಾಸನ ಈ ಕಾಲೇಜಿನ ವತಿಯಿಂದ ಶಿಕ್ಷಕರಿಗೆ ‘ಆಚಾರ್ಯ ಶಿಕ್ಷಕ ರತ್ನ ಪ್ರಶಸ್ತಿ ‘ ನೀಡಲಾಯಿತು.
ಈ ಪ್ರಶಸ್ತಿಗೆ ಹಾಸನದ ಶಿಕ್ಷಕಿ ಹೆಚ್. ಎಸ್. ಪ್ರತಿಮಾ ಹಾಸನ್ ಆಯ್ಕೆಯಾಗಿದ್ದು , ಇವರಿಗೆ ಗುರುಗಳ ಆಶೀರ್ವಾದದೊಂದಿಗೆ ಗೌರವಪೂರ್ವಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇವರು ನೆಲ ಜಲ, ನಾಡು, ನುಡಿಗಾಗಿ ಶ್ರಮಿಸುತ್ತಿರುವ ಹಾಸನ ನಗರದ ಶಿಕ್ಷಕಿ.ಸಾಮಾಜಿಕ ಚಿಂತಕಿ. ಸಾಹಿತಿ.ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರು ‘ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್(ರಿ).ರಾಜ್ಯ ಘಟಕ. ಹಾಸನ.’ ಬಹುಮುಖ ಪ್ರತಿಭೆ, ಸದಾ ಕ್ರಿಯಾಶೀಲರಾಗಿರುವ ಇವರಿಗೆ ಕಾರ್ಯಕ್ರಮ ಆಚಾರ್ಯ ಕಾಲೇಜಿನ ವತಿಯಿಂದ ಶಿಕ್ಷಣ ಕ್ಷೇತದ ಸೇವೆ ಗಮನಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾ ಸ್ವಾಮೀಜಿ ಯವರು ಹಾಗೂ ಡಾ. ಆದರ್ಶ ಎಚ್. ಆರ್. ಪ್ರಾಂಶುಪಾಲರು , ಡಾ. ವಿ. ಮಂಜುನಾಥ್, ಬಾ. ನಂ. ಲೋಕೇಶ್. ಇನ್ನೂ ಹಲವರು ಉಪಸ್ಥಿತರಿದ್ದರು.

