ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‌ಟೌನ್, ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ಯುವಕ ಮಂಡಲ (ರಿ.) ಪುತ್ತಿಗೆ ಇವರ ಸಹಯೋಗದಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಜೂ. ೨೬ರಂದು ಹಂಡೇಲು ಸ.ಹಿ.ಪ್ರಾ. ಶಾಲೆಯಲ್ಲಿ ಜರಗಿತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ವಿಶಾ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಕಾರ್ಯದರ್ಶಿ ಜಯಂತ್ ಕೆ. ಪೂಜಾರಿ, ರೋಟರಿ ಕ್ಲಬ್ ಮೂಡಬಿದಿರೆ ಮಿಡ್ ಟೌನ್ ಅಧ್ಯಕ್ಷ ವಿದೇಶ್ ಎಂ., ಯುವವಾಹಿನಿ ಮೂಡುಬಿದಿರೆ ಘಟಕದ ನಿಕಟಪೂರ್ವ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್, ಅಧ್ಯಕ್ಷ ಮುರುಳಿಧರ್ ಕೋಟ್ಯಾನ್, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‌ಟೌನ್ ಮಾಜಿ ಅಧ್ಯಕ್ಷ ಸುಶಾಂತ್ ಕರ್ಕೇರ, ಮುಖ್ಯ ಶಿಕ್ಷಕಿ ಚಂದ್ರಕಾಂತಿ, ರೋಟರಿ ಸದಸ್ಯರಾದ ಮಹೇಂದ್ರ ಕುಮಾರ್ ಜೈನ್, ಪುಷ್ಪರಾಜ್ ಜೈನ್, ಕೆ.ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.