
ಲಯನ್ಸ್ ಜಿಲ್ಲೆ 317 ಯ ಬೃಹತ್ ಸೇವಾ ಯೋಜನೆಯಾದ ಪಾದರಕ್ಷೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವಾರು ಕ್ಲಬ್ಬಿನವರು ಪಾದರಕ್ಷೆಗಳನ್ನು ಸಂಗ್ರಹಿಸಿ ಹಸ್ತಾಂತರಿಸಿದರು. ವಿಶೇಷವಾಗಿ ಲಯನ್ಸ್ ಕ್ಲಬ್ ಬೆಳ್ಮಣ್ ತನ್ನ ಸದಸ್ಯರು, ಪರಿಸರದ ನಾಗರಿಕರಿಂದ ಪಾದರಕ್ಷೆಗಳನ್ನು ಸಂಗ್ರಹಿಸಿ ಉಡುಪಿಯ ಎಮ್ ಜಿ ಎಮ್ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಅಭಿಯಾನದಲ್ಲಿ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಕ್ಲಬ್ಬಿ ನ ಪರವಾಗಿ ಮಾಜಿ ಜಿಲ್ಲಾ ಗವರ್ನರ್ ಲಯನ್ ಎನ್ ಎಮ್ ಹೆಗಡೆ, ಮಾಜಿ ಅಧ್ಯಕ್ಷರಾದ ಲಯನ್ ಸದಾನಂದ ಭಟ್, ಕಾರ್ಯದರ್ಶಿ ಲಯನ್ ಟೀನಾ ಡೆಸಾ ಮತ್ತು ಲಯನ್ ಆಶಾ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಸಂಯೋಜಕರಾದ ಲಯನ್ ಏಕನಾಥ್ ಬೋಳಾರ್, ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ಇಂಜಿನಿಯರ್ ರಮಾನಂದ್ ಕೆ, ಜಿಲ್ಲಾ ಸಲಹೆಗಾರರಾದ ಲಯನ್ ಬಿ ಅರುಣ್ ಕುಮಾರ್ ಹೆಗಡೆ, ಹಲವಾರು ಲಯನ್ಸ್ ಗಣ್ಯರು ಉಪಸ್ಥಿತರಿದ್ದರು.
