ಕಾಸರಗೋಡು ಜಿಲ್ಲಾ ಕುಲಾಲ ಸಂಘದಿಂದ ಕುಲಾಲ ಆಸರೆ ಚಿಕಿತ್ಸಾ ಧನ ಸಹಾಯ ಹಸ್ತಾoತರ

0
17

ಮಂಜೇಶ್ವರ :- ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ತೂಮಿನಾಡು ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ ಸಹಕಾರದಿಂದ ರೂಪುಗೊಂಡ ಕುಲಾಲ ಆಸರೆಯ 19 ನೇ ಸೇವಾ ಯೋಜನೆಯನ್ನು ಕುಲಾಲ ಸಂಘ ಎಣ್ಮಕಜೆ ಶಾಖೆಗೋಳಪಟ್ಟ ಪಡ್ರೆ ಗ್ರಾಮದ ಏತಡ್ಕ ಸಮೀಪದ ಪಳ್ಳತಮೂಲೆ ದಿನೇಶ್ ರವರ ಚಿಕಿತ್ಸೆಗಾಗಿ ಸಹಾಯ ಹಸ್ತದ ಚೆಕ್ ನ್ನು ತಾರೀಕು 01/11/2026 ರಂದು ಜಿಲ್ಲಾ ಸಂಘದ ಪ್ರಧಾನ ಕಚೇರಿಯಲ್ಲಿ ಫಲಾನುಭವಿ ದಿನೇಶ್ ರವರ ಸಂಬಂಧಿಕರಾದ ಅಜಿತ್ ಕುಮಾರ್ ವರಿಗೆ ಹಸ್ತಾoತರಿಸಲಾಯಿತು .ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ರವೀಂದ್ರ ಮುನ್ನಿಪ್ಪಾಡಿ, ಮಂಜೇಶ್ವರ ಕುಲಾಲ ಪಂಚಾಯತ್ ಶಾಖೆಯ ಅಧ್ಯಕ್ಷರಾದ ಗೋಪಾಲ ಸಾಲ್ಯಾನ್ ಕಣ್ವತೀರ್ಥ,ಜಿಲ್ಲಾ ಸಂಘದ ಸಮಿತಿ ಸದಸ್ಯರಾದ ಈಶ್ವರ್ ಕುಲಾಲ್ ಕಣ್ವತೀರ್ಥ, ತಾರಾನಾಥ ಕಣ್ವತೀರ್ಥ, ಸುಧೀರ್ ರಂಜನ್ ದೈಗೋಳಿ, ಸತೀಶ್ ಮಡ್ವ, ಆನಂದ ಸಾಲಿಯಾನ್, ಪ್ರಸಾದ್ ತೂಮಿನಾಡು, ಉಪಸ್ಥಿತರಿದ್ದರು.ಯೋಜನೆಯ ಯಶಸ್ವಿಗೆ ಸಹಕರಿಸಿದ ಸಹೃದಯ ಕುಲಾಲ ಬಂಧುಗಳಿಗೆ ಕಾಸರಗೋಡು ಜಿಲ್ಲಾ ಸಂಘವು ಧನ್ಯವಾದಗಳನ್ನು ಸಮರ್ಪಿಸುತ್ತದೆ.